ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆಯ ದರ್ಶನ ಆರಂಭ

By Suvarna Web DeskFirst Published Oct 12, 2017, 1:15 PM IST
Highlights

ಪಂಚಾಂಗದ ಪ್ರಕಾರ ಇಂದಿನಿಂದ ಬಲಿ ಪಾಡ್ಯಮಿಯ ಮಾರನೆ ದಿನದವರೆಗೆ ದರ್ಶನ ಭಾಗ್ಯ ಲಭಿಸಲಿದೆ. ಅಂದರೆ, ಇಂದಿನಿಂದ ಅಕ್ಟೋಬರ್ 21ರವರೆಗೆ ಹಾಸನಾಂಬೆಯು ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಈ ಬಾರೀ ದಿನದ 24ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬಾಗಿಲು ತೆಗೆದ ನಂತರ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ಕಾರ್ಯಗಳು ನೆರವೇರಲಿದೆ.

ಹಾಸನ(ಅ. 12): ವರ್ಷಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕೊಡುವ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ಇಂದು ತೆರೆದಿದೆ. ಜನರು ಈಗಾಗಲೇ ಅಧಿದೇವತೆ ಹಾಸನಾಂಬೆಯ ದರ್ಶನ ಮಾಡುತ್ತಿದ್ದಾರೆ. ಲಕ್ಷಾಂತರ ಜನರು ಈ ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆ ಇದೆ. 10 ದಿನಗಳ ಕಾಲ ಮಾತ್ರ ದರ್ಶನದ ಅವಕಾಶವಿರುತ್ತದೆ.

ಹಿಂದೂ ಪಂಚಾಂಗದ ಆಶ್ವಯುಜ ಮಾಸದ ಹುಣ್ಣಿಮೆ ನಂತರದ ಮೊದಲ ಗುರುವಾರ ಬಾಗಿಲು ತೆಗೆಯುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಅದೇ ರೀತಿ ಪರಂಪರೆಯಂತೆ ಮೈಸೂರು ತಳವಾರ ವಂಶಸ್ಥರು ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆಗೆಯಲಾಯಿತು. ಮಧ್ಯಾಹ್ನ 12:30ಕ್ಕೆ ಸರಿಯಾಗಿ ಆರಿದ್ರ ನಕ್ಷತ್ರ ಸಮಯದಲ್ಲಿ ಗರ್ಭ ಗುಡಿ ಬಾಗಿಲು ತೆಗೆಯಲಾಯಿತು.

ಪಂಚಾಂಗದ ಪ್ರಕಾರ ಇಂದಿನಿಂದ ಬಲಿ ಪಾಡ್ಯಮಿಯ ಮಾರನೆ ದಿನದವರೆಗೆ ದರ್ಶನ ಭಾಗ್ಯ ಲಭಿಸಲಿದೆ. ಅಂದರೆ, ಇಂದಿನಿಂದ ಅಕ್ಟೋಬರ್ 21ರವರೆಗೆ ಹಾಸನಾಂಬೆಯು ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಈ ಬಾರೀ ದಿನದ 24ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬಾಗಿಲು ತೆಗೆದ ನಂತರ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ಕಾರ್ಯಗಳು ನೆರವೇರಲಿದೆ.

ಮೊದಲ ದಿನದ ದರ್ಶನ ಭಾಗ್ಯ ಪಡೆಯಲು ಭಕ್ತರು ಕಾತರರಾಗಿ ನಿನ್ನೆ ರಾತ್ರಿಯಿಂದಲೇ ದೇವಾಲಯದ ಆವರಣದಲ್ಲಿ ಕುಳಿತಿದ್ದರು.

ವರದಿ: ಹರೀಶ್, ಸುವರ್ಣ ನ್ಯೂಸ್, ಹಾಸನ

click me!