
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರಾದರೂ ‘ಐ ಲವ್ ಯೂ’ ಹೇಳಿದ್ದಾರೆಯೇ? ಎಂದು ಪ್ರಶ್ನಿಸುವ ಮೂಲಕ ಗುಜರಾತ್ ದಲಿತ ಕಾರ್ಯಕರ್ತ ಹಾಗೂ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಪ್ರೇಮಿಗಳ ದಿನದ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಮೇವಾನಿ, ‘ಸಾಕಷ್ಟುಜನರು ನನಗೆ ಐ ಲವ್ ಯೂ ಹೇಳಿದ್ದಾರೆ.
ಆದರೆ ಯಾರಾದರೂ ಮೋದಿ ಜೀಗೆ ಐ ಲವ್ ಯೂ ಹೇಳಿದ್ದಾರಾ? ನನಗೆ ಈ ಬಗ್ಗೆ ಅನುಮಾನವಿದೆ. ಏನೇ ಆಗಲಿ ಪ್ರೇಮಿಗಳ ದಿನದ ಶುಭಾಶಯಗಳು’ ಎಂದು ಬರೆದಿದ್ದಾರೆ. ಅಲ್ಲದೆ ವೈರಲ್ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ‘ಮಾಣಿಕ್ಯಾ ಮಲರಾಯ ಪೂವಿ’ ಹಾಡು, ಪ್ರೇಮಿಗಳ ದಿನದಂದು ಆರ್‌ಎಸ್‌ಎಸ್ ಪ್ರತಿಭಟನೆಗೆ ಉತ್ತರವಾಗಿದೆ. ಯಾರನ್ನಾದರೂ ದ್ವೇಷಿಸುವುದಕ್ಕಿಂತ ಭಾರತೀಯರು ಪ್ರೀತಿಯನ್ನು ಇಷ್ಟಪಡುತ್ತಾರೆ ಎಂದು ಜಿಗ್ನೇಶ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.