
ಬೆಂಗಳೂರು (ಜ.23): ವಿರಾಟ್ ಕೊಯ್ಲಿ-ಅನುಷ್ಕಾ ಶರ್ಮಾ, ಯುವರಾಜ್, ಸಿಂಗ್-ಅಜೆಲ್, ಜಹೀರ್ ಖಾನ್-ಸಾಗರಿಕಾ, ಹರ್ಬಜನ್ ಸಿಂಗ್-ಗೀತಾ ಬಸ್ರಾ... ಹೀಗೆ ಬೆಳೆಯುತ್ತಾ ಸಾಗುವ ಭಾರತೀಯ ಕ್ರಿಕೆಟ್ ಸ್ಟಾರ್‌ಗಳು ಮತ್ತು ಬಾಲಿವುಡ್ ನಟಿಯರ ಪಟ್ಟಿಗೆ ಈಗ ಮತ್ತೊಂದು ಹೊಸ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ಅದುವೇ ಹಾರ್ದಿಕ್ ಪಾಂಡ್ಯಾ ಮತ್ತು ಎಲಿ ಅವ್ರಹಾಂ. ಕಳೆದ ವರ್ಷವೇ ಹಾರ್ದಿಕ್ ಪಾಂಡ್ಯಾಗೆ ಬಾಲಿವುಡ್ ನಟಿಯೊಂದಿಗೆ ಲವ್ ಆಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪರಿಣಿತಿ ಚೋಪ್ರಾ ಸ್ವಲ್ಪ ಸುಳಿವು ನೀಡಿದ್ದರೂ ಕೂಡ. ಅದಕ್ಕೆ ಉತ್ತರವೆಂಬಂತೆ ಹಾರ್ದಿಕ್ ಕೂಡ ಹೌದು ಎನ್ನುವ ಹಾಗೆ ನಡೆದುಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಸದ್ಯದ ತಾಜಾ ಸುದ್ದಿ ಏನಪ್ಪಾ ಎಂದರೆ ಪಾಂಡ್ಯಗೆ ಪ್ಯಾರ್ ಆಗಿರುವುದು ಎಲಿ ಅವ್ರಮ್ ಜೊತೆಗೆ ಎನ್ನುವುದು. ಬಿಗ್'ಬಾಸ್ ಕಂಟೆಸ್ಟೆಂಟ್ ಆಗಿ ಸದ್ದು ಮಾಡಿ, ಬಾಲಿವುಡ್'ನಲ್ಲಿಯೂ ಬೇಡಿಕೆ ಇರುವ ಎಲಿ ಅವರೊಂದಿಗೆ ಪಾಂಡ್ಯಾಗೆ ಯಾವಾಗಿಂದ ಲವ್ ಆಗಿದೆ ಎನ್ನುವುದು ಗೊತ್ತಾಗದಿದ್ದರೂ, ಕಳೆದ ಡಿಸೆಂಬರ್‌ನಲ್ಲಿ ಇಬ್ಬರೂ ಕೂಡ ಜೊತೆಯಲ್ಲಿ ಮದು ಮಕ್ಕಳ ಹಾಗೆ ಕಾಣಿಸಿಕೊಂಡಿದ್ದಾರೆ. ಅದು ಪಾಂಡ್ಯ ಸಹೋದರನ ಮದುವೆಯಲ್ಲಿ. ಈ ಫೋಟೋವನ್ನು ಎಲಿ ಇಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಇದೆಲ್ಲವನ್ನೂ ನೋಡಿದ ಮೇಲೆ ಪಾಂಡ್ಯಾಗೂ ಎಲಿಗೂ ಪ್ಯಾರ್ ಆಗಿದೆ ಎನ್ನುವ ಸುದ್ದಿಗೆ ಹೆಚ್ಚು ಹೆಚ್ಚು ಜೀವ ಬರತೊಡಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.