ಡ್ರಾನಲ್ಲಿ ಅಂತ್ಯಗೊಂಡ ತೃತೀಯ ಟೆಸ್ಟ್ : ಪಂದ್ಯ ಕಿತ್ತುಕೊಂಡ ಹ್ಯಾಂಡ್ಸ್'ಕಂಬ್, ಮಾರ್ಶ್

By Suvarna Web DeskFirst Published Mar 20, 2017, 12:00 PM IST
Highlights

ವೇಗಿ ಇಶಾಂತ್ ಶರ್ಮಾ ಬೌಲಿಂಗ್'ನಲ್ಲಿ ರೇನ್ ಶಾ ಎಲ್'ಬಿ ಬಲೆಗೆ ಬಿದ್ದರೆ, ಸ್ಪಿನ್ನರ್ ಜಡೇಜಾ ಕಾಂಗುರೋ ಕ್ಯಾಪ್ಟ್'ನ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಭಾರತದ ಗೆಲುವಿನ ಆಸೆಗೆ ಚಿಗುರೊಡೆಸಿದ್ದರು. ಆದರೆ ಅನಂತರ ಬ್ಯಾಟಿಂಗ್ ಇಳಿದ ಹ್ಯಾಂಡ್ಸ್'ಕಂಬ್, ಮಾರ್ಶ್ ಭಾರತದ ಗೆಲುವನ್ನು ಸಂಪೂರ್ಣವಾಗಿ ಕಸಿದುಕೊಂಡು ಬಿಟ್ಟರು.

ರಾಂಚಿ(ಮಾ.20): ಬೃಹತ್  ಮೊತ್ತ ಪೇರಿಸಿ ಪಂದ್ಯವನ್ನು ಗೆಲ್ಲಲ್ಲೇಬೇಕೆಂದು ಪಣತೊಟ್ಟಿದ್ದ ಭಾರತ ತಂಡಕ್ಕೆ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಆಟಗಾರರಾದ ಹ್ಯಾಂಡ್ಸಕಂಬ್, ಶೇನ್ ಮಾರ್ಶ್ ಅಡ್ಡಗಾಲಾದರು.

ಮೂರನೇ ದಿನದ ಅಂತ್ಯಕ್ಕೆ 603/9 ಡಿಕ್ಲೇರ್ ಮಾಡಿಕೊಂಡು 152 ರನ್'ಗಳ ಮುನ್ನಡೆ ಪಡೆದಿದ್ದ ಟೀಂ ಇಂಡಿಯಾ ದಿನದಾಂತ್ಯಕ್ಕೆ ಕಾಂಗುರೊಗಳ 2 ವಿಕೇಟ್ ಕಿತ್ತು ಜಯದ ಬಾಗಿಲನ್ನು ತಟ್ಟಿದ್ದರು. ಆದರೆ ಕೊನೆಯ ದಿನ ಹ್ಯಾಂಡ್ಸ್'ಕಂಬ್ ಹಾಗೂ ಶೇನ್ ಮಾರ್ಶ್ ಗೆಲುವನ್ನು ಕಿತ್ತುಕೊಂಡರಲ್ಲದೆ ಭಾರತೀಯ ಬೌಲರ್'ಗಳ ಬೆವರಿಳಿಸಿದರು.

2/23 ರನ್'ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಮ್ಯಾಟ್ ರೇನ್'ಶಾ ಹಾಗೂ ನಾಯಕ ಸ್ಟಿವನ್ ಸ್ಮಿತ್ ರನ್ ಹೆಚ್ಚು ಗಳಿಸದಿದ್ದರೂ ಕ್ರೀಸ್'ನಲ್ಲಿ ನಿಧಾನಗತಿಯ ಆಟವಾಡುತ್ತಿದ್ದರು.

ವೇಗಿ ಇಶಾಂತ್ ಶರ್ಮಾ ಬೌಲಿಂಗ್'ನಲ್ಲಿ ರೇನ್ ಶಾ ಎಲ್'ಬಿ ಬಲೆಗೆ ಬಿದ್ದರೆ, ಸ್ಪಿನ್ನರ್ ಜಡೇಜಾ ಕಾಂಗುರೋ ಕ್ಯಾಪ್ಟ್'ನ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಭಾರತದ ಗೆಲುವಿನ ಆಸೆಗೆ ಚಿಗುರೊಡೆಸಿದ್ದರು. ಆದರೆ ಅನಂತರ ಬ್ಯಾಟಿಂಗ್ ಇಳಿದ ಹ್ಯಾಂಡ್ಸ್'ಕಂಬ್, ಮಾರ್ಶ್ ಭಾರತದ ಗೆಲುವನ್ನು ಸಂಪೂರ್ಣವಾಗಿ ಕಸಿದುಕೊಂಡು ಬಿಟ್ಟರು.

ಭಾರತ ತಂಡದ ನಾಯಕ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಏನೆ ತಂತ್ರ ಉಪಯೋಗಿಸಿದರೂ ಈ ಇಬ್ಬರು ಬ್ಯಾಟ್ಸ್'ಮೆನ್'ಗಳನ್ನು ಪೆವಿಲಿಯನ್'ಗೆ ಕಳಿಸಲು ಸಾಧ್ಯವಾಗಲಿಲ್ಲ. ಭೋಜನ ಹಾಗೂ ಟೀ ವಿರಾಮದ ನಂತರವೂ ಇವರಿಬ್ಬರೆ ಆಟವಾಡುತ್ತಿದ್ದರು. ವೇಗವಾಗಿ ಬ್ಯಾಟ್ ಬೀಸದಿದ್ದರೂ ನಿಧಾನಗತಿಯಲ್ಲಿ ಭಾರತ ತಂಡದ ಬೌಲರ್'ಗಳನ್ನು ಮೈದಾನದ ತುಂಬ ಓಡಾಡಿಸಿದರು.

ಪಂದ್ಯ ಮುಗಿಯಲು 10 ಓವರ್'ಗಳು ಬಾಕಿಯಿರುವಾಗ ಮಾರ್ಶ್ 197 ಚಂಡುಗಳಲ್ಲಿ 7 ಬೌಂಡರಿಗಳೊಂದಿಗೆ 53 ರನ್'ಗಳಿಸಿ ಜಡೇಜಾ ಬೌಲಿಂಗ್'ನಲ್ಲಿ ಮುರಳಿ ವಿಜಯ್'ಗೆ ಕ್ಯಾಚಿತ್ತು ನಿರ್ಗಮಿಸಿದರು. ಅನಂತರ ಬ್ಯಾಟಿಂಗ್'ಗೆ ಬಂದ ಬಿರುಸಿನ ಆಟಗಾರ ಮ್ಯಾಕ್ಸ್'ವೆಲ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇಷ್ಟೊತ್ತಿಗಾಗಲೇ ಪಂದ್ಯ ಮುಗಿಯಲು ಕೇವಲ 5 ಓವರ್'ಗಳು ಮಾತ್ರ ಬಾಕಿಯಿದ್ದವು. ಹ್ಯಾಂಡ್ಸ್'ಕಂಬ್ 200 ಚಂಡುಗಳಲ್ಲಿ 7 ಬೌಂಡರಿಯೊಂದಿಗೆ 72 ಹಾಗೂ ವಿಕೇಟ್ ಕೀಪರ್ ವೇಡ್ 9 ರನ್'ಗಳಿಸಿ ತಂಡದ ಮೊತ್ತ 204/6 ರನ್'ಗಳೊಂದಿಗೆ ಡ್ರಾನಲ್ಲಿ ಪಂದ್ಯವನ್ನು ಸಮಾಪ್ತಿಗೊಳಿಸಿದರು. ಭಾರತದ ಪರ ರವೀಂದ್ರ ಜಡೇಜಾ 54/4 ಹಾಗೂ ಅಶ್ವಿನ್ ಮತ್ತು ಇಶಾಂತ್ ಶರ್ಮಾ ತಲಾ ಒಂದು ವಿಕೇಟ್ ಪಡೆದರು.ಭಾರತದ ಪರ ದ್ವಿಶತಕ ಗಳಿಸಿದ ಚೇತೇಶ್ವರ ಪೂಜಾರ ಪಂದ್ಯ ಪುರುಶೋತ್ತಮ ಪ್ರಶಸ್ತಿಗೆ ಭಾಜನರಾದರು

 

 

ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್: 603/9 ಡಿಕ್ಲೇರ್ಡ್

ಪೂಜಾರ:202, ಸಾಹ :117

ಆಸ್ಟ್ರೇಲಿಯಾ:451 ಹಾಗೂ 204/6

ಪಂದ್ಯ ಪುರುಶೋತ್ತಮ: ಚೇತೇಶ್ವರ ಪೂಜಾರ

ಸರಣಿ 1-1

ಮಾರ್ಚ್​ 25ರಿಂದ ಧರ್ಮಶಾಲಾದಲ್ಲಿ 4ನೇ ಹಾಗೂ ಕೊನೆ ಟೆಸ್ಟ್​

click me!