ಹಮಾರಿ ಮೇಡಂ ಮಹಾನ್: ಸುಷ್ಮಾ ಹೊಗಳಿದ ಅನ್ಸಾರಿ ತಾಯಿ!

By Web DeskFirst Published Dec 19, 2018, 2:52 PM IST
Highlights

ಪಾಕ್ ಜೈಲಿನಲ್ಲಿದ್ದ ಭಾರತೀಯ ಹಮೀದ್ ಅನ್ಸಾರಿ ಬಿಡುಗಡೆ| ಮಂಗಳವಾರವೇ ಭಾರತಕ್ಕೆ ವಾಪಸ್ಸಾದ ಎಂಜಿನಿಯರ್ ಅನ್ಸಾರಿ| ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿ ಮಾಡಿದ ಅನ್ಸಾರಿ ಕುಟುಂಬ| ಸುಷ್ಮಾ ಸಹಾಯ ಸ್ಮರಿಸಿದ ಹಮೀದ್ ಅನ್ಸಾರಿ ತಾಯಿ

ನವದೆಹಲಿ(ಡಿ.19): ಸ್ನೇಹಿತೆಯನ್ನು ಭೇಟಿಯಾಗಲು ತೆರಳಿ, ಪಾಕಿಸ್ತಾನದಲ್ಲಿ 8 ವರ್ಷಗಳಿಂದ ಬಂಧನಕ್ಕೊಳಗಾಗಿದ್ದ ಭಾರತೀಯ ಎಂಜಿನಿಯರ್‌ ಹಮೀದ್‌ ಅನ್ಸಾರಿ ಬಿಡುಗಡೆಗೊಂಡು ಭಾರತಕ್ಕೆ ಮರಳಿದ್ದಾರೆ.

ಈ ವೇಳೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ ಹಮೀದ್ ಅನ್ಸಾರಿ ಮತ್ತವರ ಕುಟುಂಬ ಸದಸ್ಯರು,  ಹಮೀದ್ ಅವರನ್ನು ಬಿಡುಗಡೆಗೊಳಿಸುವಲ್ಲಿ ಸುಷ್ಮಾ ನಿರ್ವಹಿಸಿದ ಪಾತ್ರಕ್ಕೆ ಧನ್ಯವಾದ ಹೇಳಿದರು.

ಈ ವೇಳೆ ಅನ್ಸಾರಿ ತಾಯಿ ಸುಷ್ಮಾ ಅವರನ್ನು ಉದ್ದೇಶೀಸಿ, ‘ಮೇರಾ ಭಾರತ್ ಮಹಾನ್, ಮೇರಿ ಮೇಡಂ ಮಹಾನ್, ಸಬ್ ಮೇಡಂ ನೇ ಹಿ ಕಿಯಾ’ ಎಂದು ಘೋಷಣೆ ಕೂಗಿದರು.

Indian National Hamid Ansari who came to India after being released from a Pakistan jail yesterday, meets External Affairs Minister Sushma Swaraj in Delhi. His mother tells EAM "Mera Bharat mahaan, meri madam mahaan, sab madam ne hi kiya hai." pic.twitter.com/FQEzz99Ohm

— ANI (@ANI)

2012ರಲ್ಲಿ ಸ್ನೇಹಿತೆಯನ್ನು ಭೇಟಿಯಾಗಲು ಆಫ್ಘಾನಿಸ್ತಾನ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದ ಮುಂಬೈ ನಿವಾಸಿ ಅನ್ಸಾರಿ, ಭಾರತದ ಗುಪ್ತಚರ ಇಲಾಖೆ ಸಿಬ್ಬಂದಿ ಎಂಬ ಗುಮಾನಿ ಮೇಲೆ ಪಾಕ್‌ ಸೆರೆಹಿಡಿದಿತ್ತು.

Indian National Hamid Ansari who came to India after being released from a Pakistan jail yesterday, meets External Affairs Minister Sushma Swaraj in Delhi. pic.twitter.com/J2ecKVuMuh

— ANI (@ANI)

3 ವರ್ಷಗಳ ಅಧಿಕೃತ ಜೈಲು ಶಿಕ್ಷೆ ಸೇರಿ ಒಟ್ಟು 6 ವರ್ಷಗಳ ಕಾಲ ಹಮೀದ್ ಪಾಕಿಸ್ತಾನದ ಜೈಲಿನಲ್ಲಿದ್ದರು. ಆದರೆ ಭಾರತದ ನಿರಂತರ ಪ್ರಯತ್ನದ ಫಲವಾಗಿ,  ಕಳೆದ ಡಿ.15ರಂದು ಹಮೀದ್ ಅವರನ್ನು ಪಾಕ್ ಬಿಡುಗಡೆ ಮಾಡಿತ್ತು.

ಪ್ರೇಯಸಿ ನೋಡಲು ಅಕ್ರಮವಾಗಿ ಪಾಕ್ ಪ್ರವೇಶಿಸಿದ ಮುಂಬೈ ಟೆಕ್ಕಿ ರಿಲೀಸ್!

click me!