ತಾಂತ್ರಿಕ ದೋಷದಿಂದ ಗೌಡರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

By Web DeskFirst Published Oct 7, 2016, 2:50 PM IST
Highlights

ಮಂಗಳೂರು(ಅ.7): ದೇವೇಗೌಡ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕೊಲ್ಲೂರಿನಿಂದ ಬೆಂಗಳೂರಿಗೆ ದೇವೇಗೌಡರು ಬರುತ್ತಿದ್ದಾಗ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ  ಹೆಲಿಕಾಪ್ಟರ್​ ಲ್ಯಾಂಡಿಂಗ್ ಮಾಡಿದೆ. ನಂತರ ವಿಮಾನದ ಮೂಲಕ ಗೌಡರು ಬೆಂಗಳೂರಿಗೆ ತೆರಳಿದರು​. ಪತ್ನಿ ಚೆನ್ನಮ್ಮ ಜೊತೆ ಕೊಲ್ಲೂರಿಗೆ ತೆರಳಿದ್ದ ದೇವೇಗೌಡರು ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಸ್ ಆಗುತ್ತಿದ್ದರು.

click me!