‘ಸಾಮರ್ಥ್ಯವಿಲ್ಲದ’ ಎಚ್ಎಎಲ್ ಆದಾಯವೆಷ್ಟು..?

By Web DeskFirst Published Sep 30, 2018, 10:52 AM IST
Highlights

 ರಫೇಲ್ ಯುದ್ಧ ವಿಮಾನ ತಯಾರಿ ಸುವ ಸಾಮರ್ಥ್ಯ ಬೆಂಗಳೂರಿನ ಹಿಂದುಸ್ತಾನ್ ಏರೋ ನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಇಲ್ಲ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಬೆನ್ನಲ್ಲೇ ಎಚ್‌ಎಎಲ್‌ಗೆ ದಾಖಲೆ ಯ ಆದಾಯ ಬಂದಿದೆ. 

ಬೆಂಗಳೂರು: ರಫೇಲ್ ಯುದ್ಧ ವಿಮಾನ ತಯಾರಿ ಸುವ ಸಾಮರ್ಥ್ಯ ಬೆಂಗಳೂರಿನ ಹಿಂದುಸ್ತಾನ್ ಏರೋ ನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಇಲ್ಲ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಬೆನ್ನಲ್ಲೇ ಎಚ್‌ಎಎಲ್‌ಗೆ ದಾಖಲೆ ಯ ಆದಾಯ ಬಂದಿದೆ. 

2017- 18ನೇ ಸಾಲಿನಲ್ಲಿ ಕಂಪನಿಗೆ ಸಾರ್ವಕಾಲಿಕ ದಾಖಲೆಯ 18283 ಕೋಟಿ ಆದಾಯ ಬಂದಿದೆ. ಹಿಂದಿನ ವರ್ಷ  17603 ಕೋಟಿ ರು. ಬಂದಿತ್ತು ಎಂದು ಎಚ್ ಎಎಲ್ ಸಿಎಂಡಿ ಆರ್. ಮಾಧವನ್ ತಿಳಿಸಿದ್ದಾರೆ.

ಸುಖೋಯ್ 30 ಎಂಕೆಐ, ಎಲ್‌ಸಿಎ ತೇಜಸ್, ಡಾರ್ನಿಯರ್, ಧ್ರುವ್ ಹಾಗೂ ಹೆಲಿಕಾಪ್ಟರ್ ಸೇರಿ 40 ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಕಂಪನಿ ಅಭಿವೃದ್ಧಿಪಡಿಸಿದೆ ಎಂದರು. 

click me!