ಹಫೀಜ್ ಸಯ್ಯದ್ ಕುಕೃತ್ಯ ಒಪ್ಪಿಕೊಂಡ ಪಾಕ್

By Suvarna Web DeskFirst Published May 14, 2017, 11:10 AM IST
Highlights

ಮಂಡಳಿಗೆ ಈತನನ್ನು ನಿನ್ನೆ ಕರೆತಂದಾಗ 'ಈತ ತನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದ ಆದರೆ ಆಂತರಿಕ ಮಂತ್ರಾಲಯ ಹಫೀಜ್'ನ ಹೇಳಿಕೆಯನ್ನು ತಿರಸ್ಕರಿಸಿದೆ.

ಇಸ್ಲಮಾಬಾದ್(ಮೇ.14): ಮುಂಬೈ ಭಯೋತ್ಪಾದಕ ದಾಳಿಯ ರುವಾರಿ ಹಾಗೂ ಜಮಾತ್ ಉದ್ ದವಾ'ದ ಮುಖ್ಯಸ್ಥ  ಹಫೀಜ್ ಸಯ್ಯದ್'ನ ಕುಕೃತ್ಯವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಸಯ್ಯದ್ ಮತ್ತು ಆತನ ನಾಲ್ವರು ಸಹಚರರು ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆಯ ಬೀಜ ಬಿತ್ತುತ್ತಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಮಂತ್ರಾಲಯ ನ್ಯಾಯಾಂಗ ಪರಿಶೀಲನಾ ಮಂಡಳಿಗೆ ತಿಳಿಸಿದೆ.

ಮಂಡಳಿಗೆ ಈತನನ್ನು ನಿನ್ನೆ ಕರೆತಂದಾಗ 'ಈತ ತನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದ ಆದರೆ ಆಂತರಿಕ ಮಂತ್ರಾಲಯ ಹಫೀಜ್'ನ ಹೇಳಿಕೆಯನ್ನು ತಿರಸ್ಕರಿಸಿದೆ. ಪರಿಶೀಲನಾ ಮಂಡಳಿಯಲ್ಲಿ ಪಾಕ್ ಸುಪ್ರೀಂ ಕೋರ್ಟ್'ನ ನ್ಯಾಯಮೂರ್ತಿ ಇಜಾಜ್ ಅಫ್ಜಲ್ ಖಾನ್, ಲಾಹೋರ್ ಹೈಕೋರ್ಟ್'ನ ನ್ಯಾಯಮೂರ್ತಿ ಆಯೀಷಾ ಹಾಗೂ ಬಲೂಚಿಸ್ತಾನ ಹೈಕೋರ್ಟ್ ನ್ಯಾಯಮೂರ್ತಿ ಜಮಾಲ್ ಖಾನ್ ಮುಖ್ಯಸ್ಥರಾಗಿದ್ದು, ಸಯ್ಯದ್ ಬಗೆಗಿನ ಪೂರ್ಣ ವರದಿಯನ್ನು ಮಂಡಳಿಗೆ ಸಲ್ಲಿಸಿದೆ.

ಈ ಆರೋಪಿಗಳ ಬಗ್ಗೆ ಮತ್ತೊಂದು ಸುತ್ತಿನ ವಿಚಾರಣೆ ಮೇ.15 ರಂದು ನಡೆಯಲಿದೆ. ವಿಶ್ವಸಂಸ್ಥೆ ಹಾಗೂ ಅಂತರರಾಷ್ಟ್ರಿಯ ಸಂಸ್ಥೆಗಳ ಒತ್ತಡದಿಂದಾಗಿ ಪಾಕ್ ಸರ್ಕಾರ ಸಯ್ಯದ್' ಹಾಗೂ ಆತನ ನಾಲ್ವರು ಸಹಚರರನ್ನು ಏ.30 ರಂದು ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ವಯ 90 ದಿನಗಳ ಕಾಲ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು.

click me!