ಉಗ್ರ ಸಯೀದ್ ನಮಗೂ ಭಾರೀ ಅಪಾಯಕಾರಿ

Published : Feb 21, 2017, 04:23 PM ISTUpdated : Apr 11, 2018, 12:42 PM IST
ಉಗ್ರ ಸಯೀದ್ ನಮಗೂ ಭಾರೀ ಅಪಾಯಕಾರಿ

ಸಾರಾಂಶ

ಮ್ಯೂನಿಚ್‌ನಲ್ಲಿ ಆಯೋಜಿತವಾಗಿದ್ದ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಆಸೈ, ಪಾಕಿಸ್ತಾನದ ವಿಶಾಲ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಹಫೀಜ್ ಪಾಕ್‌ಗೂ ಅಪಾಯಕಾರಿ ವ್ಯಕ್ತಿ. ಇದೇ ಕಾರಣಕ್ಕಾಗಿ ಆತನನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಇಸ್ಲಾಮಾಬಾದ್(ಫೆ.21): ಮುಂಬೈ ಸರಣಿ  ಸ್ಫೋಟ ಪ್ರಕರಣದ ರೂವಾರಿ, ಜಮಾತ್ ಉದ್ ದಾವಾ ಸಂಘಟನೆಯ ನೇತಾರ ಹಫೀಜ್ ಸಯೀದ್, ಪಾಕಿಸ್ತಾನಕ್ಕೂ ಭಾರೀ ಅಪಾಯಕಾರಿಯಾದ ವ್ಯಕ್ತಿ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೈ ಹೇಳಿದ್ದಾರೆ. ಈ ಮೂಲಕ ಹಫೀಜ್ ಉಗ್ರ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಮ್ಯೂನಿಚ್‌ನಲ್ಲಿ ಆಯೋಜಿತವಾಗಿದ್ದ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಆಸೈ, ಪಾಕಿಸ್ತಾನದ ವಿಶಾಲ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಹಫೀಜ್ ಪಾಕ್‌ಗೂ ಅಪಾಯಕಾರಿ ವ್ಯಕ್ತಿ. ಇದೇ ಕಾರಣಕ್ಕಾಗಿ ಆತನನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಉಗ್ರವಾದವನ್ನು ಯಾವುದೇ ಧರ್ಮದ ಜೊತೆ ಜೋಡಿಸುವುದು ಸರಿಯಲ್ಲ. ಉಗ್ರರು, ಕ್ರೈಸ್ತರಾಗಲೀ, ಮುಸ್ಲಿಮರಾಗಲೀ, ಹಿಂದುಗಳಾಗಲೀ ಆಗಿರುವುದಿಲ್ಲ. ಅವರೆಲ್ಲಾ ಉಗ್ರರಷ್ಟೇ ಎಂದು ಹೇಳಿದ್ದಾರೆ.

ಆದರೆ ಆಸೈ ಅವರ ಈ ಹೇಳಿಕೆಗೆ ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ರಕ್ಷಣಾ ಸಚಿವರನ್ನು ಭಾರತದ ಮುಖವಾಣಿ ಎಂದೆಲ್ಲಾ ಟೀಕಿಸಲಾಗಿದೆ. ದೇಶಪ್ರೇಮಿ ಹಫೀಜ್ ಸಯೀದ್‌ನನ್ನು ಪಾಕಿಸ್ತಾನಕ್ಕೇ ಅಪಾಯಕಾರಿ ಎಂದು ಹೇಳುವ ಮೂಲಕ ಆಸೈ ತಾವು ಭಾರತದ ಮುಖವಾಣಿ ಎಂಬುದನ್ನು ಬಹಿರಂಗವಾಗಿ ತೋರಿಸಿದ್ದಾರೆ ಎಂದು ಹಲವು ರಾಜಕೀಯ ಪಕ್ಷಗಳ ನಾಯಕರು, ಧಾರ್ಮಿಕ ಮುಖಂಡರು ಕಿಡಿಕಾರಿದ್ದಾರೆ.

ಸಯೀದ್ ಗನ್ ಪರವಾನಗಿ ರದ್ದು: ಉಗ್ರ ಹಫೀಜ್ ಸಯೀದ್ ಆತನ ಸಂಘಟನೆಯ ಸದಸ್ಯರಿಗೆ ನೀಡಲಾಗಿದ್ದ 44 ಶಸ್ತ್ರಾಸ್ತ್ರಗಳ ಪರವಾನಗಿಯನ್ನು, ಪಂಜಾಬ್ ರಾಜ್ಯ ಸರ್ಕಾರ ರದ್ದುಪಡಿಸಿದೆ. ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!