'ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ'

By Web DeskFirst Published Apr 19, 2019, 4:22 PM IST
Highlights

’ದೇಶದಲ್ಲಿ ನಕಲಿ ರಾಷ್ಟ್ರೀಯವಾದಿಗಳು ಭಾರತದ ಬಹುತ್ವವಾದಿಗಳ ನಡುವೆ ಸಂಘರ್ಷ ಇದೆ. ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ. ಮೋದಿ ಸುಳ್ಳಿನ ಸರಮಾಲೆ ಕೊಟ್ಟಿದ್ದಾರೆ.’

ಶಿವಮೊಗ್ಗ[ಏ.19]: 'ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ. ಮೋದಿ ಸುಳ್ಳಿನ ಸರಮಾಲೆ ಕೊಟ್ಟಿದ್ದಾರೆ' ಎನ್ನುವ ಮೂಲಕ ಎಚ್. ವಿಶ್ವನಾಥ್ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ 'ದೇಶದಲ್ಲಿ ನಕಲಿ ರಾಷ್ಟ್ರೀಯವಾದಿಗಳು ಭಾರತದ ಬಹುತ್ವವಾದಿಗಳ ನಡುವೆ ಸಂಘರ್ಷ ಇದೆ. ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ. ಮೋದಿ ಸುಳ್ಳಿನ ಸರಮಾಲೆ ಕೊಟ್ಟಿದ್ದಾರೆ. ಮಲೆನಾಡಿನ ಅಡಿಕೆ ಬೆಳೆಗಾರರನ್ನು ರಕ್ಷಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಸಂಸತ್ತಿನಲ್ಲಿ ಅಡಿಕೆ ಹಾನಿಕಾರಕ ಎಂದು ಅನುಮೋದನೆ ನೀಡಿದೆ. ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಜನಾ ಆಯೋಗವನ್ನು ಮರ್ಡರ್ ಮಾಡಿದ್ದೀರಿ. ಇದನ್ನು ನೀತಿ ಆಯೋಗ ಎಂದು ಮಾಡಿದ್ದೀರಿ' ಎಂದು ಹರಿಹಾಯ್ದಿದ್ದಾರೆ.

BSNL ವಿಚಾರವಾಗಿ ಮೋದಿಯನ್ನು ಆರೋಪಿಸಿರುವ ವಿಶ್ವನಾಥ್ 'ಈ ಚುನಾವಣೆ ಆಗುತ್ತಿದ್ದಂತೆ ಬಿಎಸ್ ಎನ್ ಎಲ್ ಕೂಡ ಖಾಸಗೀಕರಣ ಆಗುತ್ತೆ. ಕೇಂದ್ರ ಸರ್ಕಾರದಲ್ಲಿ ಶೇ 40 ರಷ್ಟು ಉದ್ಯೋಗ ಖಾಲಿ ಇದೆ. ಶಿವಮೊಗ್ಗದಲ್ಲಿ ವಂಶೋದಯ ಇಲ್ಲವಾ, ರಾಜ್ಯ ಬಿಜೆಪಿ ಅಧ್ಯಕ್ಷರ ಮನೆಯಲ್ಲಿ ವಂಶೋದಯ ಇಲ್ಲವಾ ಮೋದಿಯವರೆ?' ಎಂದು ಸವಾಲೆಸೆದಿದ್ದಾರೆ.

ರಫೇಲ್ ವಿವಾದದ ಕುರಿತಾಗಿ ಮಾತನಾಡಿದ ಎಚ್ ವಿಶ್ವನಾಥ್ 'ರಫೇಲ್ ಯುದ್ಧ ವಿಮಾನಗಳ ಖರೀದಿ ಯಲ್ಲಿ ಮೋದಿ ಮನೆಗೆ ಹೋಗುವುದು ಖಚಿತ. ರಫೇಲ್ ದಾಖಲೆಗಳು ಕಳೆದು ಹೋಗಿದೆ ಎಂದರೆ ಇನ್ಯಾವ ರೀತಿಯಲ್ಲಿ ರಕ್ಷಣೆ ನೀಡುತ್ತದೆ. ಮೋದಿಯವರು ತಮ್ಮ ಸ್ನೇಹಿತರಿಗೆ ಕೆಲಸ ಮಾಡಿ ಕೊಟ್ಟಿದ್ದಾರೆ. ರಾಜೀವ್ ಗಾಂಧಿಯವರ ಅಧಿಕಾರಾವಧಿಯಲ್ಲಿ ಟೆಲಿ ಕಮ್ಯುನಿಕೇಷನ್ ಕ್ರಾಂತಿ ನಡೆಯಿತು. ಇದೀಗ ಮೋದಿ ನಾನು ಮಾಡಿದ್ದು ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ದಾವೂದ್ ಇಬ್ರಾಹಿಂ ಹಿಡಿದುಕೊಂಡು ಬರ್ತೀನಿ ಅಂದಿದ್ದ ಮೋದಿ ಯಾಕೆ ಹಿಡಿದುಕೊಂಡು ಬರಲಿಲ್ಲ?' ಎಂದು ಪ್ರಶ್ನಿಸಿದ್ದಾರೆ.

click me!