
ಶ್ರವಣಬೆಳಗೊಳ (ಫೆ.21): ಕಾವೇರಿ ನದಿ ನೀರು ಹಂಚಿಕೆ ಕುರಿತ ಸುಪ್ರಿಂಕೋರ್ಟ್ ತೀರ್ಪಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸಿಹಿ ಹಂಚಿರು
ವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ವಾಸ್ತವ ನೆಲೆಯಲ್ಲಿ ಚಿಂತನೆ ಮಾಡಿದಾಗ ನಮಗೆ ಈ ತೀರ್ಪಿನಿಂದಲೂ ತೃಪ್ತಿ ಆಗಿಲ್ಲ. ಹೀಗಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು. ನ್ಯಾಯಯುತವಾಗಿ ನಮಗೆ ವಾರ್ಷಿಕ 14.75 ಟಿಎಂಸಿಯಲ್ಲ. 40 ಟಿಎಂಸಿಗೂ ಅಧಿಕ ನೀರು ಉಳಿಯಬೇಕಿತ್ತು. ಸಿಗಬೇಕಿತ್ತು. ಬೆಂಗಳೂರಿಗೆ 10 ಟಿಎಂಸಿಗೂ ಹೆಚ್ಚು ನೀರು ಬಳಸಿಕೊಳ್ಳಲು ಅವಕಾಶ ನೀಡಬೇಕಿತ್ತು. ನಾವು ಯಾವುದೇ ರೀತಿಯಲ್ಲೂ ತಮಿಳುನಾಡಿಗೆ ಮೋಸ, ಅನ್ಯಾಯ ಕಿಂಚಿತ್ತೂ ಮಾಡಿಲ್ಲ. ಆದರೂ ತಮಿಳುನಾಡು ಸುಪ್ರಿಂ ನೀಡಿರುವ ತೀರ್ಪಿನ ವಿರುದ್ಧ ತಕರಾರು ತೆಗೆದರೆ ನಮ್ಮಲ್ಲೂ ಬೇಕಾದಷ್ಟು ಅಸ್ತ್ರಗಳಿವೆ ಎಂಬ ಎಚ್ಚರಿಕೆ ಸಂದೇಶವನ್ನು ಇದೇ ವೇಳೆ ರವಾನಿಸಿದರು. ಸುಪ್ರಿಂ ತೀರ್ಪಿನಿಂದ ನಿರೀಕ್ಷಿತ ನ್ಯಾಯ ಸಿಗದಿದ್ದರೂ ವಿಧಾನಸಭೆಯಲ್ಲಿ
ಸಿದ್ದರಾಮಯ್ಯನವರು ಸಿಹಿ ಹಂಚಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಹಂಚಿದ್ದಾರೆ? ಇವರಿಗೇನಾದರೂ ಸೂಕ್ಷ್ಮ ವಿವೇಚನೆ ಇದೆಯೇ? ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.