ಪುರುಷತ್ವ ಹರಣ : ಗುರ್ಮೀತ್ ವಿರುದ್ಧ ದೋಷಾರೋಪ

By Suvarna Web DeskFirst Published Feb 2, 2018, 9:56 AM IST
Highlights

ಈಗಾಗಲೇ ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಮತ್ತು ಇಬ್ಬರು ವೈದ್ಯರ ವಿರುದ್ಧ, ಸುಮಾರು 400 ಮಂದಿಗೆ ಬಲವಂತದ ಪುರುಷತ್ವ ಹರಣ ಮಾಡಿದ ಆರೋಪದ ಪ್ರಕರಣದಲ್ಲಿ ದೋಷಾರೋಪ ಸಲ್ಲಿಕೆಯಾಗಿದೆ.

ನವದೆಹಲಿ: ಈಗಾಗಲೇ ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಮತ್ತು ಇಬ್ಬರು ವೈದ್ಯರ ವಿರುದ್ಧ, ಸುಮಾರು 400 ಮಂದಿಗೆ ಬಲವಂತದ ಪುರುಷತ್ವ ಹರಣ ಮಾಡಿದ ಆರೋಪದ ಪ್ರಕರಣದಲ್ಲಿ ದೋಷಾರೋಪ ಸಲ್ಲಿಕೆಯಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವ ಗುರ್ಮೀತ್ ವಿರುದ್ಧ ಸಿಬಿಐ ಗುರುವಾರ ಪಂಚಕುಲ ವಿಶೇಷ ಕೋರ್ಟ್‌ನಲ್ಲಿ ದೋಷಾರೋಪ ದಾಖಲಿಸಿತು.

ಗುರ್ಮೀತ್ ಜೊತೆಗೆ ವೈದ್ಯರಾದ ಪಂಕಜ್ ಗರ್ಗ್ ಮತ್ತು ಎಂ.ಪಿ. ಸಿಂಗ್ ವಿರುದ್ಧವೂ ದೋಷಾರೋಪ ದಾಖಲಾಗಿದೆ. ಗುರ್ಮೀತ್ ಬಂಧನದ ಬಳಿಕ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ಎಂ.ಪಿ. ಸಿಂಗ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಗುರ್ಮೀತ್ ಮುಖೇನ ದೇವರ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬಿಸಿ, ಹಲವಾರು ಮಂದಿಯ ಪುರುಷತ್ವ ಹರಣ ಮಾಡಲಾಗಿತ್ತು.

click me!