
ಅಹಮದಾಬಾದ್(ಜೂ.08): 12ನೇ ಕ್ಲಾಸಿನ ವಾಣಿಜ್ಯ ವಿಷಯದಲ್ಲಿ ಟಾಪರ್ ಆಗುವ ವಿದ್ಯಾರ್ಥಿ ತಾನು ಮುಂದೆ ಲೆಕ್ಕಪರಿಶೋಧಕ (ಸಿಎ) ಅಗುತ್ತೇನೆ ಅಥವಾ ಇನ್ನಾವುದೋ ಉನ್ನತ ಹುದ್ದೆ ಏರುತ್ತೇನೆ ಎಂಬ ಅಭಿಲಾಷೆ ಹೊಂದುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಸಾಂಸಾರಿಕ ಜೀವನವನ್ನೇ ಬಿಟ್ಟು ಜೈನ ಸನ್ಯಾಸಿಯಾಗಲು ಹೊರಟಿದ್ದಾನೆ!
ಹೌದು.. ಈತನ ಹೆಸರು ವರ್ಷಿಲ್ ಶಾ. ಈತ 12ನೇ ತರಗತಿಯ ಕಾಮರ್ಸ್ ವಿಷಯದಲ್ಲಿ ಕಳೆದ ಮೇ 27ರಂದಷ್ಟೇ ಶೇ.99.9 ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದ. ಆದರೆ ಇದೇ ವೇಳೆ ಈತ ಎಲ್ಲ ಲೌಕಿಕ ಜೀವನ, ಐಭೋಗಗಳನ್ನು ತೊರೆದು ಜೈನ ಸನ್ಯಾಸಿಯಾಗುವುದಾಗಿ ಘೋಷಿಸಿದ್ದಾನೆ. ಜೂನ್ 8ರಂದು ಕಲ್ಯಾಣರತ್ನ ವಿಜಯಜೀ ಮಹಾರಾಜ್ ಅವರ ಸಮ್ಮುಖದಲ್ಲಿ ವರ್ಷಿಲ್ ಶಾ ಸೂರತ್‌ನಲ್ಲಿ ಜೈನ ಸನ್ಯಾಸ ದೀಕ್ಷೆ ಪಡೆಯಲಿದ್ದಾನೆ. ತಮ್ಮ ಏಕೈಕ ಮಗನ ನಿರ್ಧಾರಕ್ಕೆ ತಂದೆ-ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ತಂದೆ ಜಿಗರ್‌ಭಾಯಿ ಆದಾಯ ತೆರಿಗೆ ಅಧಿಕಾರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.