ಒನ್ ಆ್ಯಂಡ್ ಓನ್ಲಿ ಸರ್ದಾರ್: ಏಕತಾ ಪ್ರತಿಮೆ ಎದುರು ಮಕಾಡೆ ಮಲಗಿದ ಡೈನಾಸೋರ್!

Published : Sep 11, 2019, 05:02 PM ISTUpdated : Sep 11, 2019, 05:06 PM IST
ಒನ್ ಆ್ಯಂಡ್ ಓನ್ಲಿ ಸರ್ದಾರ್: ಏಕತಾ ಪ್ರತಿಮೆ ಎದುರು ಮಕಾಡೆ ಮಲಗಿದ ಡೈನಾಸೋರ್!

ಸಾರಾಂಶ

ಮಕಾಡೆ ಮಲಗಿತು ಸರ್ದಾರ್ ಪ್ರತಿಮೆ ಬಳಿ ಇದ್ದ ಡೈನಾಸರ್ ಮೂರ್ತಿ| ನೆಲ ಕಚ್ಚಿತು 30 ಅಡಿ ಎತ್ತರದ ಮೂರ್ತಿ| ಪ್ರವಾಸಿಗರನ್ನು ಸೆಳೆಯಲು ನಿರ್ಮಿಸಿದ್ದ ಮೂರ್ತಿ

ಗಾಂಧೀನಗರ[ಸೆ.11]: ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸರ್ದಾರ್ ವಲ್ಲಭಬಾಯಿಯವರ ಏಕತಾ ಪ್ರತಿಮೆ ಬಳಿ 30 ಅಡಿ ಎತ್ತರದ ಒಂದು ಡೈನಾಸರ್ ಮೂರ್ತಿಯೊಂದನ್ನೂ ನಿರ್ಮಿಸಲಾಗಿತ್ತು. ಬರೋಬ್ಬರಿ 2 ಕೋಟಿ ವ್ಯಯಿಸಿ ನಿರ್ಮಿಸಲಾಗಿದ್ದ ಮೂರ್ತಿ ಮಾತ್ರ ಸೆಪ್ಟೆಂಬರ್ 8ರಂದು ಮಕಾಡೆ ಮಲಗಿದೆ.

ಹೌದು ಇಲ್ಲಿನ ಸಾಧು ಪಹಾಡಿಯಲ್ಲಿರುವ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗಿದ್ದ ಏಕತ ಪ್ರತಿಮೆಯೊಂದಿಗೆ, ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಗುಜರಾತ್ ಸರ್ಕಾರ ಇನ್ನೂ ಹಲವು ಕಲಾಕೃತಿಗಳನ್ನು ನಿರ್ಮಿಸಿತ್ತು. ಇವುಗಳಲ್ಲಿ ಡೈನಾಸರ್ ಮೂರ್ತಿಯೂ ಒಂದು. ಇದನ್ನು ನಿರ್ಮಿಸಲು ಬರೋಬ್ಬರಿ 1 ತಿಂಗಳು ತಗುಲಿತ್ತು. ಆದರೀಗ ಇದೆಲ್ಲವೂ ವೇಸ್ಟ್ ಆಗಿದೆ.

ದೃಷ್ಟವಶಾತ್ ಮೂರ್ತಿ ಬಿದ್ದಾಗ ಆ ಸ್ಥಳದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಸರ್ಕಾರ ಇಲ್ಲಿ ಒಂದು ಮ್ಯೂಸಿಯಂ ಹಾಗೂ ಉದ್ಯಾನವನವನ್ನೂ ನಿರ್ಮಿಸಿದೆ ಎಂಬುವುದು ಉಲ್ಲೇಖನೀಯ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದು ಸರ್ಕಾರ ಉದ್ದೇಶವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!