29 ಸರಕುಗಳು, 53 ಸೇವೆಗಳ ಜಿಎಸ್ಟಿ ದರ ಕಡಿತ

By Suvarna Web DeskFirst Published Jan 18, 2018, 8:18 PM IST
Highlights
  • ನವದೆಹಲಿ: ಇಂದು ನವದೆಹಲಿಯಲ್ಲಿ ನಡೆದ  ಜಿಎಸ್ಟಿ ಮಂಡಳಿಯ 25ನೇ ಸಭೆ
  • ಹೊಸ ಜಿಎಸ್ಟಿ ದರಗಳು ಜ.25 ರಿಂದ ಅನ್ವಯ

ನವದೆಹಲಿ: ಇಂದು ನಡೆದ ಜಿಎಸ್ಟಿ ಮಂಡಳಿಯ 24ನೇ ಸಭೆಯಲ್ಲಿ ಇನ್ನೂ ಹಲವು ಸರಕು ಹಾಗೂ ಸೇವೆಗಳ ಮೇಲಿನ ತೆರಿಗೆ ದರವನ್ನು ಪರಿಷ್ಕರಿಸಲಾಗಿದೆ.

29 ಸರಕುಗಳು ಹಾಗೂ 53 ರೀತಿಯ ಸೇವೆಗಳ ಜಿಎಸ್ಟಿ ದರವನ್ನು ಪರಿಷ್ಕರಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಫೆ.1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡಿಸಲಾಗುವ ಹಿನ್ನೆಲೆಯಲ್ಲಿ ಈ ಸಭೆಯು ಪ್ರಮುಖವಾಗಿತ್ತು.

ಹೊಸ ಜಿಎಸ್ಟಿ ದರಗಳು ಜ.25 ರಿಂದ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಜಿಎಸ್ಟಿ ಫೈಲಿಂಗ್’ನ್ನು ಸರಳೀಕರಣಗೊಳಸಿಸುವ ಬಗ್ಗೆ ಮಂಡಳಿಯು ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆ ಬಗ್ಗೆ ನಂದನ್ ನೀಲೆಕಣಿ ವಿಸ್ತೃತವಾದ ವರದಿಯನ್ನು ನೀಡಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ.

ಈ ಹಿಂದೆ ಸಂಗ್ರಹವಾದ ಆದಾಯದ ಬಗ್ಗೆಯೂ ಚರ್ಚೆ ನಡೆಯಿತು. ಸಂಗ್ರಹವಾಗಿರುವ ₹ 35000 ಐಜಿಎಸ್ಟಿ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್’ಗಳನ್ನು ಜಿಎಸ್ಟಿಯಡಿಯಲ್ಲಿ ತರಲಾಗುವುದೇ ಎಂಬ ಪ್ರಶ್ನೆಗೆ, ‘ ಆ ಬಗ್ಗೆ ಇಂದು ಚರ್ಚೆ ನಡೆದಿಲ್ಲ, ಸಾಧ್ಯವಾದರೆ ಮುಂದಿನ ಸಭೆಯಲ್ಲಿ ಚರ್ಚಿಸುತ್ತೇವೆ, ಎಂದು ಉತ್ತರಿಸಿದ್ದಾರೆ.

ಬಳಸಲ್ಪಟ್ಟ ಮಧ್ಯಮ ಹಾಗೂ ಘನ ವಾಹನಗಳು, ಸಾರ್ವಜನಿಕ ಸಾರಿಗೆಗಾಗಿ ಜೈವಿಕ ಇಂಧನ ಬಳಸಲ್ಪಡುವ ಬಸ್ಸುಗಳಿಗೆ ಜಿಎಸ್ಟಿ ದರವನ್ನು 28% ದಿಂದ 12% ಕ್ಕೆ ಇಳಿಸಲಾಗಿದೆ.

 ಸಕ್ಕರೆಯಿಂದ ತಯಾರಿಸಲ್ಪಟ್ಟ ಮಿಠಾಯಿ, 20 ಲೀ. ನೀರಿನ ಕ್ಯಾನ್’ಗಳು, ಕೆಲ ರೀತಿಯ 12 ಬಗೆಯ ಜೈವಿಕ ಕೀಟನಾಶಕಗಳು ಹಾಗೂ ರಸಗೊಬ್ಬರಗಳು, ಬಯೋ ಡೀಸೆಲ್, ಕೃಷಿಗೆ  ಬಳಸುವ ಡ್ರಿಪ್ ಹಾಗೂ ಯಾಂತ್ರಿಕ ಸ್ಪ್ರೇಯರ್’ಗಳಿಗೆ ಜಿಎಸ್ಟಿ ದರವನ್ನು ಶೇ.18ರಿಂದ ಶೇ.12ಕ್ಕಿಸಳಿಸಲು ನಿರ್ಧರಿಸಲಾಗಿದೆ.

ಹಾಗೆಯೇ ಅರಶಿನ ಹುಡಿ, ಮೆಹಂದಿ ಕೋನ್, ಖಾಸಗಿ ಅನಿಲ ಸಿಲಿಂಡರ್’ಗಳು, ಹಾಗೂ ಉಪಗ್ರಹ ಉಡಾವಣೆ ವಾಹನಗಳ ತಯಾರಿಯಲ್ಲಿ ಬಳಸುವ ವೈಜ್ಞಾನಿಕ ಹಾಗೂ ಯಾಂತ್ರಿಕ ಉಪಕರಣಗಳಿಗೆ ಜಿಎಸ್ಟಿ ದರವನ್ನು 18% ರಿಂದ 5%ಕ್ಕಿಳಿಸಲು ತೀರ್ಮಾನಿಸಲಾಗಿದೆ.

click me!