
ನವದೆಹಲಿ : ಭಾರತದ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಸುಧಾರಣೆ ಎನ್ನಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ಮೊದಲ ವರ್ಷ ಒಟ್ಟು 7.41 ಲಕ್ಷ ಕೋಟಿ ರು. ಜಿಎಸ್‌ಟಿ ಸರ್ಕಾರದ ಬೊಕ್ಕಸಕ್ಕೆ ಹರಿದುಬಂದಿದೆ.
ಕಳೆದ ಮಾರ್ಚ್ 31ಕ್ಕೆ ಅಂತ್ಯಗೊಂಡ 2017-18ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಒಟ್ಟು 7.41 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹಿಸಿದೆ. ಇದರಲ್ಲಿ ಮೊದಲ ನಾಲ್ಕು ತಿಂಗಳನ್ನು ಸೇರಿಸಿಲ್ಲ. ಏಕೆಂದರೆ ಜಿಎಸ್‌ಟಿ 2017ರ ಜುಲೈ 1ರಿಂದ ಜಾರಿಗೆ ಬಂದಿತ್ತು. ಹೀಗಾಗಿ 2017ರ ಏಪ್ರಿಲ್, ಮೇ, ಜೂನ್, ಜುಲೈ ತಿಂಗಳ ತೆರಿಗೆ ಆದಾಯವನ್ನು ಇದರಲ್ಲಿ ಸೇರಿಸದೆ ಆಗಸ್ಟ್ 1ರಿಂದ ಇಲ್ಲಿಯವರೆಗಿನ ಆದಾಯವನ್ನು ಮಾತ್ರ ಸೇರಿಸಲಾಗಿದೆ. ಅಂದರೆ, 8 ತಿಂಗಳಲ್ಲಿ 7.41 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾದಂತಾಗಿದೆ.
ಈ ಎಂಟು ತಿಂಗಳಲ್ಲಿ ಪ್ರತಿ ತಿಂಗಳು ಸರಾಸರಿ 89000 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಕೊನೆಯ ಮಾಚ್‌ರ್ ತಿಂಗಳಲ್ಲಿ ಮಾತ್ರ 24000 ಕೋಟಿ ರು. ಸಂಗ್ರಹವಾಗಿದೆ. ‘ಒಟ್ಟಾರೆ ಜಿಎಸ್‌ಟಿ ಸಂಗ್ರಹ ಜಿಎಸ್‌ಟಿ ಮಂಡಳಿಯ ನಿರೀಕ್ಷೆಗೆ ತಕ್ಕಂತೆಯೇ ಇದೆ. ರಾಜ್ಯಗಳಲ್ಲೂ ಜಿಎಸ್‌ಟಿ ಸಂಗ್ರಹದ ಕೊರತೆ ತಿಂಗಳಿನಿಂದ ತಿಂಗಳಿಗೆ ಇಳಿಕೆಯಾಗುತ್ತಿದ್ದು, ಸದ್ಯ ಶೇ.17ರಷ್ಟುಮಾತ್ರ ಇದೆ ಇದೆ’ ಎಂದು ಕೇಂದ್ರ ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿದೆ.
2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರ 17.10 ಲಕ್ಷ ಕೋಟಿ ರು. ಪರೋಕ್ಷ ತೆರಿಗೆ ಸಂಗ್ರಹಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.