ಕುಮಾರಸ್ವಾಮಿ ಕರೆಸಬೇಕು ಎಂದು ಉಪವಾಸ ಕುಳಿತ ವರ

Published : Nov 30, 2017, 02:34 PM ISTUpdated : Apr 11, 2018, 12:57 PM IST
ಕುಮಾರಸ್ವಾಮಿ ಕರೆಸಬೇಕು ಎಂದು ಉಪವಾಸ ಕುಳಿತ ವರ

ಸಾರಾಂಶ

ಕುಮಾರಸ್ವಾಮಿ ಅವರ ಅಭಿಮಾನಿ. ಡಿ.1ರಂದು ಈತನ ವಿವಾಹ ನಿಗದಿಯಾಗಿದ್ದು `ನನ್ನ ಮದುವೆಗೆ ಕುಮಾರಸ್ವಾಮಿ ಅವರನ್ನು ಕರೆಸಿ' ಎಂದು ಸ್ಥಳೀಯ ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದ್ದ. ಆದರೆ, ಯಾವ ಮುಖಂಡರೂ ವಾಗ್ದಾನ ನೀಡದಿದ್ದರಿಂದ ಬೇಸತ್ತು ಬುಧವಾರ `ಮದುವೆಗೆ ಕುಮಾರಸ್ವಾಮಿ ಅವರು ಬರಲೇಬೇಕು' ಎಂದು ಪಟ್ಟು ಹಿಡಿದು ಧರಣಿ ಕುಳಿತಿದ್ದ.

ಭಾರತೀನಗರ(ನ.30): `ನನ್ನ ಮದುವೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬರಲೇಬೇಕು' ಎಂದು ಹಠ ಹಿಡಿದು ಯುವಕನೊಬ್ಬ ತನ್ನ ಮನೆಯ ಮುಂದೆಯೇ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ರವಿ ಉಪವಾಸ ಕುಳಿತ ಯುವಕ. ಈತ ಕುಮಾರಸ್ವಾಮಿ ಅವರ ಅಭಿಮಾನಿ. ಡಿ.1ರಂದು ಈತನ ವಿವಾಹ ನಿಗದಿಯಾಗಿದ್ದು `ನನ್ನ ಮದುವೆಗೆ ಕುಮಾರಸ್ವಾಮಿ ಅವರನ್ನು ಕರೆಸಿ' ಎಂದು ಸ್ಥಳೀಯ ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದ್ದ. ಆದರೆ, ಯಾವ ಮುಖಂಡರೂ ವಾಗ್ದಾನ ನೀಡದಿದ್ದರಿಂದ ಬೇಸತ್ತು ಬುಧವಾರ `ಮದುವೆಗೆ ಕುಮಾರಸ್ವಾಮಿ ಅವರು ಬರಲೇಬೇಕು' ಎಂದು ಪಟ್ಟು ಹಿಡಿದು ಧರಣಿ ಕುಳಿತಿದ್ದಾನೆ.

ಅಸ್ತು ಎಂದ ಎಚ್ಡಿಕೆ: ರವಿಯ ಧರಣಿ ಕುಳಿತ ವಿಚಾರ ತಿಳಿದು ಜೆಡಿಎಸ್ ಮುಖಂಡರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ಬಳಿಕ ಧರಣಿ ನಿರತನೊಂದಿಗೂ ಕುಮಾರಸ್ವಾಮಿ ಅವರು ಮಾತನಾಡಿದ್ದು, ಮದುವೆಗೆ ಬರುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಸಂತಸಗೊಂಡ ಯುವಕ ನಿರಶನ ಕೈಬಿಟ್ಟಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ: ಇಕ್ಬಾಲ್
ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌: ಬಿಜೆಪಿಗೇ 82%!