ವಾಹನ ಸವಾರರೇ ಎಚ್ಚರ : ಕೇಂದ್ರದಿಂದ ಹೊಸ ನೀತಿ

By Web DeskFirst Published Jan 7, 2019, 8:12 AM IST
Highlights

ವಾಹನ ಸವಾರರೇ ಎಚ್ಚರ, ಕೇಂದ್ರ ಸರ್ಕಾರದಿಂದ ಹೊಸ ನೀತಿಯೊಂದು ಜಾರಿಯಾಗುತ್ತಿದೆ. ನಕಲಿಯಾಗಿ ಚಾಲನಾ ಪರವಾನಿಗೆ ಪತ್ತೆಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದೆ. 

ನವದೆಹಲಿ: ಒಬ್ಬರೇ ಹಲವು ಚಾಲನಾ ಪರ ವಾನಗಿ (ಡ್ರೈವಿಂಗ್ ಲೈಸೆನ್ಸ್- ಡಿ ಎಲ್) ಹೊಂದುವುದು ಹಾಗೂ ನಕಲಿ ಡಿಎಲ್ ಹಾವಳಿಯನ್ನು ಮಟ್ಟ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಚಾಲನಾ ಪರವಾನಗಿಯನ್ನು ಆಧಾರ್ ಜತೆ ಜೋಡಣೆ ಮಾಡಲು ಮುಂದಾಗಿದೆ.

ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದೆ. ಈಗಾಗಲೇ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಿದ್ದು, ಅಂಗೀಕಾರ ಬಾಕಿ ಇದೆ. ಶೀಘ್ರದಲ್ಲೇ ಚಾಲನಾ ಪರವಾ ನಗಿ ಜತೆ ಆಧಾರ್ ಜೋಡಣೆ ಕಡ್ಡಾಯವಾಗ ಲಿದೆ ಎಂದು ಕಾನೂನು ಮತ್ತು ಸಾಮಾಜಿಕ ನ್ಯಾಯ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ. 

ಪಂಜಾಬ್‌ನ ಪಗ್ವಾಡದಲ್ಲಿ ನಡೆದ 106 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಮಾತ ನಾಡಿದ ಅವರು, ಆಧಾರ್ ಅನ್ನು ಡಿಎಲ್ ಜತೆ ಜೋಡಣೆ ಮಾಡುವುದರಿಂದ ಆಗುವ ಲಾಭವಗಳನ್ನು ವಿವರಿಸಿದರು. ಪಂಜಾಬ್‌ನಲ್ಲಿ ಒಬ್ಬ ವ್ಯಕ್ತಿ ಮದ್ಯಪಾನ ಮಾಡಿ ವಾಹನ ಓಡಿಸಿ, ನಾಲ್ವರನ್ನು ಕೊಂದು, ಬೇರೊಂದು ರಾಜ್ಯಕ್ಕೆ ಹೋಗಿ ಬೇರೆ ವಿಳಾಸದಲ್ಲಿ ಮತ್ತೊಂದು ಡಿ. ಎಲ್. ಪಡೆದುಕೊಳ್ಳುವ ಸಾಧ್ಯತೆ ಈಗಿನ ವ್ಯವಸ್ಥೆಯಲ್ಲಿ ಇದೆ. ಆದರೆ ಆಧಾರ್ ಜೋಡಣೆ ಮಾಡಿದರೆ, ಆತ ತನ್ನ ಹೆಸರು ಬದಲಿಸಿಕೊಳ್ಳಬಹುದು. ಬಯೋಮೆಟ್ರಿಕ್ಸ್‌ನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. 

ಬೇರೊಂದು ವಿಳಾಸ ದಲ್ಲಿ ಡಿ.ಎಲ್. ಪಡೆಯಲು ಯತ್ನಿಸಿ ದರೆ, ಆತನ ಹೆಸರಿನಲ್ಲಿ ಈಗಾಗಲೇ ವಾಹನ ಚಾಲನಾ ಪರವಾನಗಿ ಇರುವುದು ಬಯೋಮೆಟ್ರಿಕ್ಸ್ ನಿಂದಾಗಿ ತಿಳಿಯುತ್ತದೆ ಎಂದರು. ಆಧಾರ್ ಲಿಂಕ್ ಮಾಡುವುದರಿಂದ ನಕಲಿ ಅಥವಾ ಡ್ಯುಪ್ಲಿಕೇಟ್ ಡಿ.ಎಲ್. ಹಾವಳಿ ತಪ್ಪಲಿದೆ. ಜತೆಗೆ ಸಂಚಾರ ನಿಯಮ ಉಲ್ಲಂಘಿಸಿ ಎಷ್ಟು ದಂಡ ಬಾಕಿ ಉಳಿಸಿಕೊಂಡಿದ್ದೀರಿ ಎಂಬ ದಾಖಲೆ ಸಿಗುತ್ತದೆ ಎಂದರು.

click me!