ಮುಗ್ಧ ಅಲ್ಪಸಂಖ್ಯಾತರ ಪ್ರಕರಣದಲ್ಲಿ ಸರ್ಕಾರ ಯೂ ಟರ್ನ್

By Suvarna Web DeskFirst Published Jan 28, 2018, 7:31 AM IST
Highlights

ಮುಗ್ಧ ಅಲ್ಪಸಂಖ್ಯಾತರ’ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆಯುವ ಸಂಬಂಧ ಹೊರಡಿಸಿದ್ದ ಸುತ್ತೋಲೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಅದನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರ, ‘ಅಲ್ಪಸಂಖ್ಯಾತರು’ ಎಂಬ ಶಬ್ದ ತೆಗೆದುಹಾಕಿ ಕೇವಲ ‘ಮುಗ್ಧರ’ ವಿರುದ್ಧದ ಪ್ರಕರಣ ವಾಪಸ್ ಪಡೆಯುವ ಕುರಿತಂತೆ ಪೊಲೀಸ್ ಇಲಾಖೆಯಿಂದ ಅಭಿಪ್ರಾಯ ಕೋರಿ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು : ‘ಮುಗ್ಧ ಅಲ್ಪಸಂಖ್ಯಾತರ’ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆಯುವ ಸಂಬಂಧ ಹೊರಡಿಸಿದ್ದ ಸುತ್ತೋಲೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಅದನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರ, ‘ಅಲ್ಪಸಂಖ್ಯಾತರು’ ಎಂಬ ಶಬ್ದ ತೆಗೆದುಹಾಕಿ ಕೇವಲ ‘ಮುಗ್ಧರ’ ವಿರುದ್ಧದ ಪ್ರಕರಣ ವಾಪಸ್ ಪಡೆಯುವ ಕುರಿತಂತೆ ಪೊಲೀಸ್ ಇಲಾಖೆಯಿಂದ ಅಭಿಪ್ರಾಯ ಕೋರಿ ಸುತ್ತೋಲೆ ಹೊರಡಿಸಿದೆ.

ಇದರಿಂದಾಗಿ ಸಿದ್ದರಾಮಯ್ಯ ಸರ್ಕಾರ ಜನಾಕ್ರೋಶಕ್ಕೆ ಮಣಿದು ದೊಡ್ಡ ಯೂ-ಟರ್ನ್ ಹೊಡೆದಂತಾಗಿದೆ. ಶನಿವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ‘ಕಳೆದ ಡಿಸೆಂಬರ್ 22ರಂದು ಹೊರಡಿಸಿದ್ದ ಸುತ್ತೋಲೆ ವಾಪಸ್ ಪಡೆಯಲಾಗಿದೆ. ಅದಕ್ಕೆ ಬದಲಾಗಿ ಹೊಸದಾಗಿ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

click me!