ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿ; ರೈತರ ಖಾತೆಗೆ ಹಣ ಜಮಾ

Published : Mar 12, 2019, 04:22 PM IST
ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿ; ರೈತರ ಖಾತೆಗೆ ಹಣ ಜಮಾ

ಸಾರಾಂಶ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಹಣ | 2.6 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರ ಬ್ಯಾಂಕ್ ಖಾತೆಗೆ  5215 ಕೋಟಿ ಹಣ ಜಮೆ 

ನವದೆಹಲಿ (ಮಾ. 12): ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದಂತೆ ದೇಶದ 2.6 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 5215 ಕೋಟಿ ಹಣವನ್ನು ಜಮಾ ಮಾಡಿರುವುದಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ಪ್ರಧಾನಿ ಕಿರೀಟ ಯಾರಿಗೆ..? ಎಲೆಕ್ಷನ್ ಭವಿಷ್ಯ ನುಡಿದ ಕೋಡಿಶ್ರೀ..!

ಈ ಯೋಜನೆಯಡಿ ಪ್ರತಿ ರೈತನಿಗೆ ವಾರ್ಷಿಕ 6 ಸಾವಿರ ರು.ಗಳನ್ನು ಮೂರು ಕಂತಿನಲ್ಲಿ ನೀಡುವುದಾಗಿ ತಿಳಿಸಿದ್ದು, ಇದರಿಂದ ದೇಶದ 12 ಕೋಟಿ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿತ್ತು. ಇದಕ್ಕಾಗಿ ಎನ್‌ಡಿಎ ಸರ್ಕಾರ ಬಜೆಟ್‌ನಲ್ಲಿ 20 ಸಾವಿರ ಕೋಟಿ ಅನುದಾನ ಮೀಸಲಿರಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Nitin Gadkari: ಮೆಟಾ, ಎಕ್ಸ್ ಮತ್ತು ಗೂಗಲ್ ವಿರುದ್ಧ ಪ್ರಕರಣ ದಾಖಲಿಸಿದ ಗಡ್ಕರಿ! ತಪ್ಪಿತಸ್ಥರೆಂದು ಸಾಬೀತಾದರೆ ಯಾರಿಗೆ ಶಿಕ್ಷೆ?
EPFO ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: UPI ಆಧಾರಿತ ಕ್ಲೈಮ್ ಸೇವೆ ಆಗಸ್ಟ್‌ಗೆ ಮುಂದೂಡಿಕೆ!