
ಹರ್ಯಾಣ(ಆ.28): ಈಗಾಗಲೇ ನ್ಯಾಯಾಲಯದಿಂದ ಅತ್ಯಾಚಾರಿ ಎಂದು ಘೋಷಿಸಲಾಗಿರುವ ಬಾಭಾ ರಾಮ್ ರಹೀಂ ಶಿಕ್ಷೆ ಪ್ರಮಾಣದ ಪ್ರಕಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಇವರಿಗೆ 3 ವರ್ಷ ಜೈಲಾಗುತ್ತಾ ಅಥವಾ 7 ವರ್ಷ ಜೈಲಾ ಎಂಬ ಪ್ರಶ್ನೆ ಮೂಡಿದೆ. ಇನ್ನು ಅತ್ಯಾಚಾರಿ ಎಂದು ತೀರ್ಪು ನೀಡಿದಂದೇ ಬಾಬಾ ಬೆಂಬಲಿಗರ ಗೂಂಡಾಗಿರಿಯಿಂದ ಮೂರು ರಾಜ್ಯಗಳು ನಲುಗಿದ್ದು, ಇಂದು ಕೂಡಾ ಇಂತಹ ಪರಿಸ್ಥಿತಿ ಎದುರಾಗದಿರಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಹಿಂಸಾಚಾರಕ್ಕಿಳಿಯುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹೊಡೆಯುವ ಆದೇಶವನ್ನೂ ಹೊರಡಿಸಲಾಗಿದೆ.
ರೋಹ್ಟಕ್'ನ ಅಜ್ಞಾತ ಸ್ಥಳವೊಂದರಲ್ಲಿ 15 ಸಾವಿರಕ್ಕೂ ಹೆಚ್ಚು ಬಾಬಾರ ಮಂದಿ ಅವಿತಿದ್ದಾರೆ ಎಂಬ ವಿಚಾರ ಹರ್ಯಾಣ ಸರ್ಕಾರಕ್ಕೆ ಗುಪ್ತಚರ ಇಲಾಖೆಯಿಂದ ತಿಳಿದು ಬಂದಿದೆ. ಹೀಗಾಗಿ ಭಾರೀ ಕಟ್ಟೆಚ್ಚರದ ನಡುವೆಯೂ ಹಿಂಸಾಚಾರ ಭುಗಿಲೇಳುವ ಆತಂಕ ಎದುರಾಗಿದೆ. ಹೀಗಾಗಿ ಭದ್ರತೆಯ ನಡುವೆಯೂ, ನಿಯಮಗಳನ್ನು ಉಲ್ಲಂಘಿಸಿ ಹಿಂಸಾಚಾರಕ್ಕಿಳಿಯುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನೂ ಹೊರಡಿಸಲಾಗಿದೆ. ಒಟ್ಟಾರೆಯಾಗಿ ಬಾಬಾ ಶಿಕ್ಷೆಯ ತೀರ್ಪು ಭಾರೀ ಕುತೂಹಲವಬನ್ನು ಕೆರಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.