ಕೊನೆಗೂ ಫಲಿಸಿದೆ ಬಿಬಿಎಂಪಿ ಪರಿಸರ ಕಾಳಜಿ ಅಭಿಯಾನ: ಈ ಬಾರಿ ಶೇ.70ರಷ್ಟು ಮಣ್ಣಿನ ಗಣೇಶನ ವಿಸರ್ಜನೆ

By Suvarna Web DeskFirst Published Aug 28, 2017, 10:01 AM IST
Highlights

ಗಣೇಶ ಹಬ್ಬ ಆಚರಣೆ ಬಳಿಕ ಬಿಬಿಎಂಪಿಗೆ ಸಿಕ್ಕಾಪಟ್ಟೆ ತಲೆನೋವು. ಪಿಒಪಿ ಗಣೇಶ ವಿಸರ್ಜನೆಯಿಂದ ಸ್ವಚ್ಛತಾ ಕಾರ್ಯದ್ದೇ ದೊಡ್ಡ ತಲೆನೋವು. ಆದರೆ ಈ ಬಾರಿ ಪಾಲಿಕೆಗೆ ಅಷ್ಟೊಂದು ಹೇಳಿಕೊಳ್ಳುವ ಸಮಸ್ಯೆ ಇಲ್ಲ. ಪಾಲಿಕೆಯ ಪರಿಸರ ಜಾಗೃತಿಗೆ ಜನ ಜೈ ಎಂದಿದ್ದಾರೆ.

ಬೆಂಗಳೂರು(ಆ.28): ಗಣೇಶ ಚತುರ್ಥಿ ಬಂದ್ರೆ ಮುಗಿದೇ ಹೋಯ್ತು. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಗಣೇಶನ ಮೂರ್ತಿ ಪ್ರತಿಷ್ಠಾಪನೆಯಾಗುತ್ತೆ. ಅದರಲ್ಲೂ  ಪ್ಲಾಸ್ಟರ್ ಆಪ್ ಪ್ಯಾರೀಸ್ ಗಣೇಶನದ್ದೇ ಕಾರುಬಾರು. ಆದ್ರೆ ಈ ಬಾರಿ ಹಾಗಾಗಿಲ್ಲ ಮಣ್ಣಿನ ಗಣೇಶನಿಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ.

ಹಿಂದೆಲ್ಲ ಯಾವ ಕೆರೆಗಳಲ್ಲಿ ನೋಡಿದರೂ ಪಿಒಪಿ ಗಣೇಶನ ಮೂರ್ತಿಗಳು ತೇಲಾಡುತ್ತಿದ್ದವು. ಆದ್ರೀಬಾರಿ ಮಣ್ಣಿನ ಗಣೇಶನದ್ದೇ ಪಾರುಪತ್ಯ. ಕಳೆದ ಮೂರು ದಿನಗಳಲ್ಲಿ ಹಲಸೂರು ಕೆರೆಯಲ್ಲಿ ನಡೆದ ಗಣೇಶ ವಿಸರ್ಜನೆಯಲ್ಲಿ ಕಳೆದ ಬಾರಿಗೆ ಹೋಲಿಸಿದ್ರೆ ಶೇ.70ರಷ್ಟು  ಪಿಒಪಿ ಗಣೇಶನ  ವಿಸರ್ಜನೆ ಕಡಿಮೆಯಾಗಿದೆ ಅಂತಾರೆ ಕೆರೆ ಸ್ವಚ್ಛತೆಯ ಗುತ್ತಿಗೆದಾರರು.

ಇನ್ನೂ ಜನ ಕೂಡ ಅಷ್ಟೇ ಪಾಲಿಕೆಯ ಪರಿಸರ ಸ್ನೇಹಿ ಗಣೇಶನ ಅಭಿಯಾನಕ್ಕೆ  ಸಾಥ್ ಕೊಟ್ಟಿದ್ದಾರೆ. ಕಳೆದ ಬಾರಿ ಪಿಒಪಿ ಗಣೇಶನ ಪ್ರತಿಷ್ಠಾಪಿಸಿದವರು ಈ ಬಾರಿ ಮಣ್ಣಿನ ವಿನಾಯಕನ ಪೂಜಿಸಿದ್ದಾರೆ. ಅಂತೂ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಶ್ರಮಕ್ಕೆ ಫಲ ಸಿಕ್ಕಿದೆ.. ಪರಿಸರ ಸ್ನೇಹಿ ಗಣೇಶನ ಪೂಜಿಸಿ ಜನ ಕೂಡ ನಗರದ ಮಾಲಿನ್ಯ ತಡೆಗಟ್ಟುವಲ್ಲಿ ಸಾಥ್ ನೀಡಿದ್ದಾರೆ. ಈ ಪರಿಸರ ಕಾಳಜಿ ಹೀಗೆ ಮುಂದುವರಿಯಲಿ.

 

click me!