ಎಲ್ಲಾ ಅಧಿಕಾರಗಳು ಒಬ್ಬ ವ್ಯಕ್ತಿ ಬಳಿ ಇರುವುದರ ಪರಿಣಾಮವೇ ನೋಟು ನಿಷೇಧ : ರಾಹುಲ್ ಗಾಂಧಿ

Published : Nov 21, 2016, 03:40 PM ISTUpdated : Apr 11, 2018, 12:44 PM IST
ಎಲ್ಲಾ ಅಧಿಕಾರಗಳು ಒಬ್ಬ ವ್ಯಕ್ತಿ ಬಳಿ ಇರುವುದರ ಪರಿಣಾಮವೇ ನೋಟು ನಿಷೇಧ : ರಾಹುಲ್ ಗಾಂಧಿ

ಸಾರಾಂಶ

ಸರ್ಕಾರದ ಕ್ರಮವು ಊಹಿಸಲಸಾಧ್ಯವಾದ ರೀತಿಯಲ್ಲಿ ಆರ್ಥಿಕತೆಗೆ ನಷ್ಟವನ್ನುಂಟುಮಾಡಿದೆ. ಸಾಮಾನ್ಯ ಜನತೆ ವಿಶೇಷವಾಗಿ ಮೀನುಗಾರರು, ಕಲಾವಿದರು, ದಿನಗೂಲಿ ಕಾರ್ಮಿಕರು ಹಾಗೂ ರೈತರು ನರಳುತ್ತಿದ್ದಾರೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅಲಹಾಬಾದ್ (ನ.21):  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಲ್ಲಾ ಅಧಿಕಾರಗಳು ಒಬ್ಬ ವ್ಯಕ್ತಿ ಬಳಿ ಇರುವುದರ ನೇರ ಪರಿಣಾಮವೇ ವಿಚಾರ-ರಹಿತ ಅಪಮೌಲ್ಯೀಕರಣ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಭಾರತದ ಇತಿಹಾಸದಲ್ಲೇ ಪ್ರಮುಖವಾದ ಆರ್ಥಿಕ ನಿರ್ಧಾರವೆಂದು ಬಣ್ಣಿಸಲಾಗುತ್ತಿರುವ  ಕ್ರಮವನ್ನು ಮೂರು-ನಾಲ್ಕು ಮಂದಿಯೊಂದಿಗೆ ಮಾತ್ರವೇ ಚರ್ಚಿಸಲಾಗಿದೆ. ಇದು ಜನರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಯೋಚಿಸಲಾಗಿದೆಯೇ?  ಎಲ್ಲಾ ಅಧಿಕಾರಗಳು ಒಬ್ಬ ವ್ಯಕ್ತಿ ಬಳಿ ಮಾತ್ರ ಇರುವುದರಿಂದ, ಯಾವುದೇ ಯೋಚನೆ ಮಾಡದೇ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸರ್ಕಾರದ ಕ್ರಮವು ಊಹಿಸಲಸಾಧ್ಯವಾದ ರೀತಿಯಲ್ಲಿ ಆರ್ಥಿಕತೆಗೆ ನಷ್ಟವನ್ನುಂಟುಮಾಡಿದೆ. ಸಾಮಾನ್ಯ ಜನತೆ ವಿಶೇಷವಾಗಿ ಮೀನುಗಾರರು, ಕಲಾವಿದರು, ದಿನಗೂಲಿ ಕಾರ್ಮಿಕರು ಹಾಗೂ ರೈತರು ನರಳುತ್ತಿದ್ದಾರೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಶ್ರೀಮಂತರು ಯಾವುದೇ ಸಮಸ್ಯೆಯಿಲ್ಲದೇ ಹಾಯಾಗಿದ್ದಾರೆ, ಆದರೆ ಬಡಜನರು ಸರತಿ ಸಾಲುಗಳಲ್ಲಿ ನಿಂತು ನರಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!