
ಬೆಂಗಳೂರು: ಪರಿಶಿಷ್ಟಜಾತಿ, ವರ್ಗದವರು ಸರ್ಕಾರಿ ಜಾಗ ದಲ್ಲಿ ಅನಧಿಕೃತ ಗುಡಿಸಲು ಹಾಕಿದ್ದರೆ ಅವರಿಗೆ ಅಲ್ಲೇ ಸರ್ಕಾರದ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಇದೊಂದು ರೀತಿಯ ಅಕ್ರಮ-ಸಕ್ರಮ ಯೋಜನೆಯಾಗಿದ್ದು, ನಗರ ಪ್ರಟ್ಟಣಗಳಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಗುಡಿಸಲು ಹಾಕಿಕೊಂಡಿದ್ದರೆ ಅವರಿಗೆ ಅಲ್ಲೇ ಬಡಾವಣೆ ನಿರ್ಮಿಸಿ ಮನೆಗಳನ್ನು ನೀಡಲಾಗುತ್ತದೆ. ಆದರೆ ಅವರು ವಾಸಿಸುವ ಜಾಗ ಕಂದಾಯ ಇಲಾಖೆಗೆ ಸೇರಿರಬೇಕು. ಈ ಸಮುದಾಯವರು ಒಂದು ವೇಳೆ ಖಾಸಗಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡಿದ್ದರೂ ಅವರಿಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಖಾಸಗಿ ಜಮೀನು ಮಾಲೀ ಕರಿಗೆ ಮಾರ್ಗಸೂಚಿ ದರದ ಮೂರು ಪಟ್ಟು ದರ ನೀಡಿ ಖರೀದಿಸಿ ಅಲ್ಲಿ ಬಡಾವಣೆ ನಿರ್ಮಿ ಸಲಾಗುತ್ತದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಎಲ್ಲೆಲ್ಲಿ ಪರಿಶಿಷ್ಟಜಾತಿ, ವರ್ಗದವರು ಗುಡಿಸಲು ಹಾಕಿಕೊಂಡಿರುವವರಿಗೆ ಬದುಕುತ್ತಿದ್ದಾರೆ ಎನ್ನುವ ಬಗ್ಗೆ ಸಮೀಕ್ಷೆ ನಡೆಸ ಲಾಗುತ್ತಿದ್ದು, ವರದಿ ಸಿಕ್ಕ ನಂತರ ಕ್ರಮ ಕೈಗೊ ಳ್ಳಲಾಗುವುದು. ಹೀಗೆ ಮನೆಗಳನ್ನು ನೀಡುವು ದಕ್ಕೆ ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲ. ಒಟ್ಟಾರೆ ಜನರು ಗುಡಿಸಲಿನಲ್ಲಿ ಬದುಕ ಬಾರದು ಎನ್ನುವುದು ಸರ್ಕಾರದ ಉದ್ದೇಶ ಎಂದರು.
ಈ ವರ್ಷ ಪ್ರತಿ ಹೋಬಳಿಯಲ್ಲೂ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ 125 ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತದೆ. ಗುಡಿ ಸಲು ವಾಸಿಗಳಿಗೆ ಮನೆಗಳನ್ನು ಕಲ್ಪಿಸಲು ಅಂ ಬೇಡ್ಕರ್ ನಿವಾಸ್ ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ಪ್ರತಿ ಮನೆಗೂ ರೂ.1.25 ಲಕ್ಷ ನೀಡ ಲಾಗುತ್ತದೆ. ಈ ನೆರವನ್ನು ಇನ್ನಷ್ಟುಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನಿರುದ್ಯೋಗಿಗಳ ಸ್ವಯಂ ಉದ್ಯೋಗಕ್ಕಾಗಿ ರೂ.40, 000 ಸಾಲ ನೀಡಲಾಗುತ್ತದೆ. ಇದರಲ್ಲಿ ರೂ.25, 000 ಸಬ್ಸಿಡಿ ಇರುತ್ತದೆ. ಉಳಿದ ರೂ.15,000ಕ್ಕೆ ಶೇ.6ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.