ಹಳೆ ನೋಟು ವಿನಿಮಯ ಮಿತಿಯನ್ನು ಕಡಿತಗೊಳಿಸಿದ ಹಣಕಾಸು ಇಲಾಖೆ!

Published : Nov 16, 2016, 08:05 PM ISTUpdated : Apr 11, 2018, 12:56 PM IST
ಹಳೆ ನೋಟು ವಿನಿಮಯ ಮಿತಿಯನ್ನು ಕಡಿತಗೊಳಿಸಿದ ಹಣಕಾಸು ಇಲಾಖೆ!

ಸಾರಾಂಶ

ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ವಿತ್ತ ಇಲಾಖೆ ಹಣ ವಿನಿಮಯ ನೀತಿಯನ್ನು ಬದಲಾವಣೆ ಮಾಡಿದ್ದು, ಇಷ್ಟು ದಿನ ಇದ್ದ 4, 500 ಸಾವಿರ ಹಣ ಬದಲಾವಣೆ ಮಿತಿಯನ್ನು 2000 ರು.ಗೆ ಕಡಿತಗೊಳಿಸಿದೆ. ನೂತನ ಮಿನಿಮಯ ನೀತಿಯ ಅನ್ವಯ ವ್ಯಕ್ತಿಯೋರ್ವ ದಿನವೊಂದಕ್ಕೆ ಗರಿಷ್ಠ 2500 ರು. ಮಾತ್ರ ಹಣ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಅದರಂತೆ ಈ ಹಿಂದೆ 4 ಸಾವಿರ ರು. ಹಳೆಯ ನೋಟು ನೀಡಿ ಹೊಸ ನೋಟು  ಬದಲಾವಣೆ ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಆ ಮಿತಿಯನ್ನು 2 ಸಾವಿರ ರು.ಗೆ ಇಳಿಕೆ ಮಾಡಲಾಗಿದೆ.

ನವದೆಹಲಿ(ನ.11): ಐನೂರು, ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ರದ್ಧತಿಯಿಂದ ಜನರು ಹೈರಾಣಾಗಿದ್ದಾರೆ. ದಿನ ಬೆಳಗಾದರೆ  ಬ್ಯಾಂಕ್, ಎಟಿಎಂಗಳ ಮುಂದೆ ಕ್ಯೂ ನಿಲ್ಲಬೇಕಾಗಿದೆ. ಜನರ ಈ ಹೆಣಗಾಟ ತಪ್ಪಿಸಲು, ಇದೀಗ ಕೇಂದ್ರ ವಿತ್ತ ಇಲಾಖೆ ಹಣ ವಿನಿಮಯ ಮಿತಿಯನ್ನು ಬದಲಾವಣೆ ಮಾಡಿದೆ.

ದಿನಕ್ಕೆ 4500 ಬದಲು 2 ಸಾವಿರ ರೂ. ವಿನಿಮಯ: ವಾರಕ್ಕೆ ಬೆಳೆಗಾಗಿ ರೈತರಿಗೆ ವಿತ್ ಡ್ರಾ ಮಿತಿ 25,000 ರೂ.

ಐನೂರು, ಸಾವಿರ ನೋಟು ಚಲಾವಣೆ ರದ್ಧತಿ ನಂತರ  ದಿನ ನಿತ್ಯದ ಹಣ ಬದಲಾಣೆ ಮಿತಿಯನ್ನು ಕಡಿತಗೊಳಿಸಲಾಗಿದೆ. 4500ರು ದಿಂದ 2500ಕ್ಕೆ  ಕಡಿತಗೊಳಿಸಲಾಗಿದೆ. ಅಂದರೆ ದಿನಕ್ಕೆ 4500 ರೂ. ಬದಲು 2 ಸಾವಿರ ರೂಪಾಯಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಮದುವೆ ಮತ್ತು ಇತರೆ ಸಮಾರಂಭಗಳ ನಿಮಿತ್ತ ಹಣ  ವಿತ್ ಡ್ರಾ ಮಾಡುವ ಕುಟುಂಬ ಗರಿಷ್ಠ 2.5 ಲಕ್ಷ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಈ ರೀತಿ ವಿತ್ ಡ್ರಾ ಮಾಡುವ ಖಾತೆ ಕೈವೈಸಿ ಹೊಂದುವುದು ಅನಿವಾರ್ಯವಾಗಿದೆ. ಅಂತೆಯೇ ರೈತ ತನ್ನ ಬೆಳೆಗಾಗಿ, ಇತರೆ ಕೃಷಿಕ ಚಟುವಟಿಕೆಗಳಿಗಾಗಿ ಒಂದು ವಾರಕ್ಕೆ ಗರಿಷ್ಢ 25000 ರು. ಹಣವನ್ನು ವಿತ್ ಡ್ರಾ ಮಾಡಬಹುದು.  ಇದು ಬೆಳೆ ಸಾಲಕ್ಕೂ ಅನ್ವಯವಾಗಲಿದೆ. ಈ ರೀತಿ 25000 ರು. ಹಣ ವಿತ್ ಡ್ರಾ ಮಾಡುವ ಖಾತೆ ಕಡ್ಡಾಯವಾಗಿ ರೈತನ ಹೆಸರಿನಲ್ಲಿರಬೇಕು.

ದೇಶಾದ್ಯಂತದ ಎಟಿಎಂ ಗಳಲ್ಲಿ ಹೊಸ 2,000 ರೂ. ಮತ್ತು 500 ರೂ. ನೋಟುಗಳು ಹೊರಬರುವುದಕ್ಕೆ ಅವುಗಳ ತಂತ್ರಾಂಶ ಬದಲಾವಣೆ ಮಾಡುವ ಕೆಲಸವನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಕಾರ್ಯಪಡೆಯನ್ನು ರೂಪಿಸಲಾಗಿದೆ. ಈ ಕೆಲಸ ಬಹಳ ಬೇಗನೆ ಮುಗಿಯಲಿದ್ದು, ಕೆಲವೇ ದಿನಗಳಲ್ಲಿ ಎಟಿಎಂ ಗಳಿಂದ ನಿರಾತಂಕವಾಗಿ ನಗದು ಪಡೆಯಬಹುದಾಗಿದೆ ಅಂತಾ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಒಟ್ನಲ್ಲಿ  ಸತತ 9 ದಿನಗಳೇ ಕಳೆದರೂ ಜನರ ಭವಣೆ ಮಾತ್ರ  ನೀಗಿಲ್ಲ. ಇಂದೂ ಕೂಡ ಜನರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತು ಹಣ ಬದಲಾವಣೆ ಮತ್ತು ಹಳೆಯ ನೋಟುಗಳನ್ನು ಠೇವಣಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!