ಡಿಜಿಪಿ ಮತ್ತು ಡಿಐಜಿ ಕಿತ್ತಾಟಕ್ಕೆ ಅಂತ್ಯ ಹಾಡಲು ಮುಂದಾಗಿದೆ ಸರ್ಕಾರ

Published : Jul 15, 2017, 06:38 PM ISTUpdated : Apr 11, 2018, 01:02 PM IST
ಡಿಜಿಪಿ ಮತ್ತು ಡಿಐಜಿ ಕಿತ್ತಾಟಕ್ಕೆ ಅಂತ್ಯ ಹಾಡಲು ಮುಂದಾಗಿದೆ ಸರ್ಕಾರ

ಸಾರಾಂಶ

ಡಿಜಿಪಿ ಮತ್ತು ಡಿಐಜಿ ಕಿತ್ತಾಟಕ್ಕೆ ಸರ್ಕಾರ ತಿಲಾಂಜಲಿ ಹಾಡಲು ಹೊರಟಿದ್ದರೆ ಮತ್ತೊಂದು ಕಡೆ, ಜೈಲಿಗೆ ವಿಸಿಟ್​ ಮೇಲೆ ವಿಸಿಟ್ ಮಾಡಿ, ಇಬ್ಬರು ಅಧಿಕಾರಿಗಳು ಸಪರೇಟ್ ವರದಿಗಳನ್ನ ರೆಡಿ ಮಾಡಿಕೊಂಡಿದ್ದಾರೆ. ನಾನಾ ನೀನು ಅನ್ನುವ ಇಬ್ಬರ ಅಹಂಗೆ ಕೊನೆ ಎಂದು ಅನ್ನುವ ಪ್ರಶ್ನೆ ಎದುರಾಗಿದೆ.

ಬೆಂಗಳೂರು (ಜು.15): ಡಿಜಿಪಿ ಮತ್ತು ಡಿಐಜಿ ಕಿತ್ತಾಟಕ್ಕೆ ಸರ್ಕಾರ ತಿಲಾಂಜಲಿ ಹಾಡಲು ಹೊರಟಿದ್ದರೆ ಮತ್ತೊಂದು ಕಡೆ, ಜೈಲಿಗೆ ವಿಸಿಟ್​ ಮೇಲೆ ವಿಸಿಟ್ ಮಾಡಿ, ಇಬ್ಬರು ಅಧಿಕಾರಿಗಳು ಸಪರೇಟ್ ವರದಿಗಳನ್ನ ರೆಡಿ ಮಾಡಿಕೊಂಡಿದ್ದಾರೆ. ನಾನಾ ನೀನು ಅನ್ನುವ ಇಬ್ಬರ ಅಹಂಗೆ ಕೊನೆ ಎಂದು ಅನ್ನುವ ಪ್ರಶ್ನೆ ಎದುರಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ನಿಗ್ರಹಕ್ಕೆ ಸರ್ಕಾರ ಮುಂದಾಗಿದೆ. ಡಿಐಜಿ ರೂಪಾ, ವರದಿಯ ಬೆನ್ನಲ್ಲೆ, ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯ್​ಕುಮಾರ್ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲು ಮುಂದಾಗಿದೆ. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನಾನಾಲ್ಕು ಪುಟಗಳ  ವರದಿ ಸಲ್ಲಿಸಿದ್ದ ಡಿಐಜಿ ರೂಪಾ, ಇದರ ಬೆನ್ನಲ್ಲೆ ಮತ್ತೊಂದು ವರದಿಯನ್ನ ಸಿದ್ದಪಡಿಸಿದ್ದಾರೆ.

ಎರಡನೇ ವರದಿಯಲ್ಲಿ ಏನಿದೆ ?

ಜಯಲಲಿತಾ ಆಪ್ತೆ ಶಶಿಕಲಾ ಬಗ್ಗೆ ಉಲ್ಲೇಖ

ಶಶಿಕಲಾಗೆ ನೀಡುತ್ತಿರುವ ಸ್ಪೇಷಲ್ ಟ್ರೀಟ್​ಮೆಂಟ್​ ಬಗ್ಗೆ ಹೇಳಿಕೆ

ಜೈಲಿನಲ್ಲಿ ಕೆಲವು ಕಡೆ ಸಿಸಿಟಿವಿ ವರ್ಕ್​ ಆಗುತ್ತಿಲ್ಲ

ಶಶಿಕಲಾ ಇರುವ ಸೆಲ್​ ಬಳಿ ಸಿಸಿಟಿವಿ ಯಾಕೆ ಅಳವಡಿಸಿಲ್ಲ

ಜೈಲಿಗೆ ಭೇಟಿ ನೀಡಿದ್ದಾಗ ಮಾಡಿಸಿದ್ದ ಕೆಲ ದೃಶ್ಯಗಳು ಡಿಲೀಟ್ ಆಗಿರುವ ಸಂಶಯ

ಖೈದಿಗಳ ಪ್ರತಿಭಟನೆಗೆ ಅವಕಾಶ ನೀಡಿದವಱರು..?

ಇಂಥಾ ಹಲವು ಅಂಶಗಳನ್ನ ಒಳಗೊಂಡಂತೆ ಮತ್ತೊಂದು ವರದಿಯನ್ನ ರೆಡಿ ಮಾಡಿಕೊಂಡಿರುವ ಡಿಐಜಿ ರೂಪಾ, ಆ ವರದಿಯನ್ನ ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ಮತ್ತು ರಾಜ್ಯ ಡಿಜಿಪಿ ಆರ್ ಕೆ ದತ್ತಾ ಅವರಿಗೆ ಸಲ್ಲಿಸಲು ಮುಂದಾಗಿದ್ದಾರೆ. ಡಿಜಿಪಿ ಮತ್ತು ಡಿಐಜಿ ನಡುವಿನ ಕಿತ್ತಾಟ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದ್ದಂತೆ ಸರ್ಕಾರ ಇಬ್ಬರನ್ನ ಗಪ್​-ಚುಪ್ ಆಗುವಂತೆ ಮಾಡಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ, ನಿವೃತ್ತ ಐಎಎಸ್​ ಅಧಿಕಾರಿ ವಿನಯ್​ ಕುಮಾರ್ ಅವರನ್ನ ನೇಮಿಸಿದ್ದು, ವರದಿ ಬರುವವರೆಗೂ ಕಾಯಿರಿ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇಬ್ಬರ ಕಿತ್ತಾಟದ ನಡುವೆಯೇ ಪರಪ್ಪನ ಅಗ್ರಹಾರಕ್ಕೆ ಒಬ್ಬರಾದ ಮೇಲೋಬ್ಬರು ವಿಸಿಟ್ ಮಾಡುತ್ತಿದ್ದಾರೆ. ಬೆಳಿಗ್ಗೆ ಡಿಜಿಪಿ ಸತ್ಯನಾರಾಯಣರಾವ್ ಪರಪ್ಪನ ಅಗ್ರಹಾರಕ್ಕೆ ವಿಸಿಟ್ ಮಾಡಿದ್ರೆ, ಮಧ್ಯಾಹ್ನ ಡಿಐಜಿ ರೂಪಾ, ಜೈಲಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ವಿಚಾರ ಬಹಿರಂಗಗೊಂಡ ಬಳಿಕ, ರೂಪಾ ವಿರುದ್ದ ಪ್ರತಿಭಟನೆ ಮಾಡಿದವರ ವಿರುದ್ದ ಕಾನೂನು ಕ್ರಮ ಏಕಿಲ್ಲ ಅನ್ನುವ ಬಗ್ಗೆ ಜೈಲಾಧಿಕಾರಿಗಳಿಂದ ವಿವರಣೆ ಕೇಳಿದ್ದಾರೆ. ಎಲ್ಲಾ ಬೆಳವಣಿಗೆಗಳ ಬಗ್ಗೆ, ಕಾರಾಗೃಹ ಡಿಜಿಪಿ, ಸತ್ಯನಾರಾಯಣರಾವ್, ವರದಿಯೊಂದನ್ನ ರಾಜ್ಯ ಮುಖ್ಯಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವಿನ ಕಿತ್ತಾಟ ಮತ್ತೆ ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆ ಏನೋ..? ಕಾದುನೋಡಬೇಕಿದೆ........!!!

 

 

 

 

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!