ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲಿಸುವವರೆಗೆ ನಾವು ಗೆಲ್ಲಲಾರೆವು: ಮೆಹಬೂಬ ಮುಫ್ತಿ

By Suvarna Web DeskFirst Published Jul 15, 2017, 5:56 PM IST
Highlights

ಅಮರನಾಥ್ ದಾಳಿಯ ನಡೆದು 2 ದಿನಗಳ ನಂತರ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿಯಾಗಿ ಕಾಶ್ಮೀರದ ಭದ್ರತಾ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ.

ನವದೆಹಲಿ (ಜು.15): ಅಮರನಾಥ್ ದಾಳಿಯ ನಡೆದು 2 ದಿನಗಳ ನಂತರ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿಯಾಗಿ ಕಾಶ್ಮೀರದ ಭದ್ರತಾ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಚೀನಾವು ರಾಜ್ಉದ ಭದ್ರತಾ ವಿಚಾರದಲ್ಲಿ ಮೂಗು ತೂರಿಸುತ್ತಿದೆ. ಹಾಗಾಗಿ ಭಯೋತ್ಪಾದನೆ ಸಮಸ್ಯೆಯನ್ನು ಎದುರಿಸಲಾಗುತ್ತಿದೆ ಎಂದು ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ.

ನಾವು ಇಲ್ಲಿ ಕಾನೂನು ಸುವ್ಯವಸ್ಥೆ ವಿರುದ್ಧ ಹೋರಾಡುತ್ತಿಲ್ಲ. ಬಾಹ್ಯ ಶಕ್ತಿಗಳು ಮಧ್ಯೆ ಮೂಗು ತೂರಿಸುತ್ತಿವೆ. ಹೊರಗಿನಿಂದ ಉಗ್ರಗಾಮಿಗಳು ಇಲ್ಲಿಗೆ ಬಂದು ಪರಿಸ್ಥಿತಿಯನ್ನು ಹದಗೆಡಿಸುತ್ತಿವೆ. ದುರಾದೃಷ್ಟವಶಾತ್ ಚೀನಾ ಕೂಡಾ ಮೂಗು ತೂರಿಸಲು ಪ್ರಾರಂಭಿಸಿದೆ. ದೇಶದ ಎಲ್ಲಾ ರಾಜಕೀಯ ಪಕ್ಷಗಳು ನಮಗೆ ಬೆಂಬಲಿಸುವವರೆಗೆ ನಾವು ಇದನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಮುಫ್ತಿ ಹೇಳಿದ್ದಾರೆ.  

click me!