ಹೆಚ್ಚು ಅಪಾಯದ 9,500 ಎನ್‌ಬಿಎಫ್‌ಸಿಗಳ ಪಟ್ಟಿಬಿಡುಗಡೆ

By Suvarna Web DeskFirst Published Feb 27, 2018, 8:04 AM IST
Highlights

ಬ್ಯಾಂಕಿಂಗ್‌ ಸೇವಾ ವ್ಯಾಪ್ತಿಯೊಳಗೆ ಬರದ ಸುಮಾರು 9,500 ಬ್ಯಾಂಕೇತರ ಹಣಕಾಸು ಕಂಪೆನಿ (ಎನ್‌ಬಿಎಫ್‌ಸಿ)ಗಳನ್ನು ಸರ್ಕಾರ ಗುರುತಿಸಿ ಪಟ್ಟಿಮಾಡಿದೆ.

ನವದೆಹಲಿ: ಬ್ಯಾಂಕಿಂಗ್‌ ಸೇವಾ ವ್ಯಾಪ್ತಿಯೊಳಗೆ ಬರದ ಸುಮಾರು 9,500 ಬ್ಯಾಂಕೇತರ ಹಣಕಾಸು ಕಂಪೆನಿ (ಎನ್‌ಬಿಎಫ್‌ಸಿ)ಗಳನ್ನು ಸರ್ಕಾರ ಗುರುತಿಸಿ ಪಟ್ಟಿಮಾಡಿದೆ.

ಈ ಕಂಪೆನಿಗಳು ಅಕ್ರಮ ಹಣಕಾಸು ವ್ಯವಹಾರ ತಡೆ ಕಾಯ್ದೆಯ ನಿಬಂದನೆಗಳಿಗೆ ಒಳಪಡುವುದಿಲ್ಲವಾದುದರಿಂದ, ಇವು ‘ಹೆಚ್ಚು ಅಪಾಯ’ಕ್ಕೆ ಒಳಗಾಗಬಲ್ಲ ಹಣಕಾಸು ಸಂಸ್ಥೆಗಳ ವ್ಯಾಪ್ತಿಗೊಳಪಡುತ್ತವೆ.

ಸುಮಾರು 9,491 ಅತಿಹೆಚ್ಚು ಅಪಾಯಕಾರಿ ಹಣಕಾಸು ಸಂಸ್ಥೆಗಳ ಪಟ್ಟಿಯನ್ನು ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಗುಪ್ತಚರ ಘಟಕ ಪ್ರಕಟಿಸಿದೆ. ಭಾರತದ ಆರ್ಥಿಕತೆಯಲ್ಲಿ ಹಣಕಾಸು ಅಪರಾಧಗಳನ್ನು ತಡೆಯಲು ಮತ್ತು ಅಂತಹ ಸಂದರ್ಭಗಳಲ್ಲಿ ಕಾನೂನು ಜಾರಿ ಸಂಸ್ಥೆಗಳನ್ನು ಎಚ್ಚರಿಸಲು ಈ ಪಟ್ಟಿಅನುಕೂಲವಾಗಲಿದೆ.

ಕೆಲವು ಕೋ-ಆಪರೇಟಿವ್‌ ಬ್ಯಾಂಕ್‌ಗಳೂ ಈ ಪಟ್ಟಿಯಲ್ಲಿವೆ. ಕಂಪೆನಿ ಕಾಯ್ದೆಯಡಿ ನೋಂದಣಿಯಾಗಿ ಸಾಲ, ಮುಂಗಡಗಳು, ಶೇರುಗಳನ್ನು ಹೊಂದುವುದು, ಬಾಂಡ್‌ಗಳ ವಿತರಣೆ ಸೇರಿದಂತೆ ಇತರ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಂಪೆನಿಗಳನ್ನು ಬ್ಯಾಂಕೇತರ ಹಣಕಾಸು ಕಂಪೆನಿ ಎನ್ನಲಾಗುತ್ತದೆ.

click me!