ಭಾರತದಲ್ಲಿ ಪೋರ್ನ್ ನೋಡುವುದು ಅಪರಾಧವಲ್ಲ, ಸರ್ಕಾರವೇ ಕೊಟ್ಟ ಮಾಹಿತಿ!

By Web DeskFirst Published Jul 25, 2019, 11:16 PM IST
Highlights

ಭಾರತದಲ್ಲಿ ಪೋರ್ನ್ ಸೈಟ್‌ಗಳು ಬ್ಯಾನ್ ಇದು ಕಳೆದ  ಒಂದು ವರ್ಷದಿಂದ ಚರ್ಚೆಯಲ್ಲಿರುವ ವಿಷಯ. ನ್ಯಾಯಾಲಯದ ಆದೇಶ ಪಾಲನೆ ಹೆಸರಿನಲ್ಲಿ ಕೆಲವು ಟೆಲಿಕಾಂ ಸಂಸ್ಥೆಗಳು ಸಹ ಸೈಟ್‌ಗಳ ಮೇಲೆ ನಿರ್ಬಂಧ ಹೇರಿದ್ದು ಹಿಂದೆಲ್ಲ ಸುದ್ದಿಯಾಗಿತ್ತು. ಇದೆ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಮಾಹಿತಿ ಹಕ್ಕು ಅರ್ಜಿಯೊಂದು ಬೇರೆಯದೇ ಆದ ಉತ್ತರ ನೀಡಿದೆ.

ಬೆಂಗಳೂರು[ಜು. 25] ಏರ್ ಟೆಲ್, ಜಿಯೋ, ಬಿಎಸ್‌ ಎನ್ ಎಲ್ ಸೇರಿದಂತೆ ಹಲವು ಮೊಬೈಲ್ ಸೇವಾ ಸಂಸ್ಥೆಗಳು ಪೋರ್ನ್ ಸೈಟ್‌ ಗಳ ಮೇಲೆ ನಿಷೇಧ ಹೇರಿದ್ದವು. ಬಳಕೆದಾರರು ಪೋರ್ನ್ ವೆಬ್ ತಾಣಕ್ಕೆ ಪ್ರವೇಶ ಮಾಡಲು ಬಯಸಿದಾಗ ಟೆಲಿಕಾಂ ಇಲಾಖೆಯ ಆದೇಶದ ಅನ್ವಯ ಬ್ಲಾಕ್ ಆಗಿದೆ ಎಂಬ ಮೆಸೇಜ್ ಸಹ ಬರುತ್ತಿತ್ತು.

ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ ಎಂಬ ಸಂಸ್ಥೆ ಈ ಬಗ್ಗೆ ಮಾಹಿತಿ ಕೇಳಿ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿತ್ತು. ಇದಕ್ಕೆ ಉತ್ತರ ನೀಡಿರುವ ಟೆಲಿಕಾಂ ಕಂಪನಿ ಯಾವ ಕಾರಣಕ್ಕೆ ಪೋರ್ನ್ ಬ್ಯಾನ್ ಮಾಡಲಾಯಿತು ಎಂಬ ವಿಚಾರವನ್ನು ಉತ್ತರದ ರೂಪದಲ್ಲಿ ನೀಡಿದೆ.

ಕದ್ದುಮುಚ್ಚಿ ಪೋರ್ನ್ ನೋಡ್ತೀರಾ? ನಿಮ್ಮೇಲೆ ಕಣ್ಣಿಟ್ಟಿದ್ದಾರೆ ಇವ್ರು!

ಮೂರು ನ್ಯಾಯಾಲಯದ ಆದೇಶಗಳು ಬ್ಯಾನ್ ಮಾಡಲು ಮುಖ್ಯ ಕಾರಣ. ಮುಂಬೈ ಮಾಜಿಸ್ಟ್ರೆಟ್ ಕೋರ್ಟ್ ನ 2016 ಮತ್ತು 2017 ರ ತೀರ್ಪು, ಉತ್ತರಾಖಂಡ ಹೈಕೋರ್ಟ್ ತೀರ್ಪು ಮಕ್ಕಳ ಪೋರ್ನೋಗ್ರಫಿ ಬಗ್ಗೆ ನೀಡಿದ್ದ ಆದೇಶದ ನಂತರ ಬ್ಲಾಕ್ ಮಾಡಲಾಯಿತು.

ಉತ್ತರಾಖಂಡದ ನ್ಯಾಯಾಲಯದ ಆದೇಶದ ನಂತರ ಒಟ್ಟು 857 ಸೈಟ್ ಗಳು ಬ್ಯಾನ್ ಆದವು. ಆದರೆ  ಇಲಾಖೆ ಕೊಟ್ಟ ಪ್ರತಿಕ್ರಿಯೆ ಮತ್ತೊಂದು ಅಂಶವನ್ನು ಹೇಳಿದೆ. ಸೈಟ್ ಗಳ ಬ್ಯಾನ್ ಗೂ ಪೋರ್ನ್ ವೀಕ್ಷಣೆಗೂ ಸಂಬಂಧ ಇಲ್ಲ. ಭಾರತದಲ್ಲಿ ಪೋರ್ನ್ ವೀಕ್ಷಣೆ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಖಾಸಗಿಯಾಗಿ ಪೋರ್ನ್ ವೀಕ್ಷಣೆ ಮಾಡುವುದು ಭಾರತದಲ್ಲಿ ಅಪರಾಧ ಅಲ್ಲ. ಆದರೆ ಮಕ್ಕಳ ಪೋರ್ನೋಗ್ರಫಿ ನೋಡುವುದು ಜತೆಗೆ ಇದರಿಂದ ಇನ್ನೊಬ್ಬರಿಗೆ ತೊಂದರೆ ನೀಡುವುದನ್ನು ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.

 

 

click me!