ಶಾಕಿಂಗ್ ನ್ಯೂಸ್: ಮತ್ತೆ ಅಗತ್ಯ ವಸ್ತುಗಳ ಬೆಲೆ ಏರಿಸಿದ ಕೇಂದ್ರ ಸರ್ಕಾರ

By Web DeskFirst Published Oct 12, 2018, 7:51 AM IST
Highlights

ಕೇಂದ್ರ ಸರ್ಕಾರ ಮತ್ತೆ ಆಮದು ಸುಂಕ ದರವನ್ನು  ಹೆಚ್ಚಳ ಮಾಡಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಕೂಡ ಏರಿಕೆ ಕಂಡು ಬರಲಿದೆ. 

ನವದೆಹಲಿ, ಅ12: ಅಮೆರಿಕ ಡಾಲರ್‌ ಎದುರು ರುಪಾಯಿ ಮೌಲ್ಯ ನಿರಂತರ ಕುಸಿತ ಮತ್ತು ವಿದೇಶಿ ವಸ್ತುಗಳ ಆಮದು ತಡೆ ನಿಟ್ಟಿನಲ್ಲಿ ಸಂವಹನಕ್ಕೆ ಬಳಸುವ ಕೆಲವು ನಿರ್ದಿಷ್ಟಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಮತ್ತೆ ಶೇ.20ರವರೆಗೂ ಆಮದು ಸುಂಕ ಏರಿಕೆ ಮಾಡಿದೆ. 

ಇದರಲ್ಲಿ ಟೀವಿ ರೆಕಾರ್ಡರ್‌ ಹಾಗೂ ಸೌಂಡ್‌ ರೆಕಾರ್ಡರ್‌ಗಳು ಸೇರಿವೆ. ಆಮದು ಸುಂಕ ಏರಿಕೆ ಅಕ್ಟೋಬರ್‌ 12ರಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರೀಯ ಆಮದು ಮತ್ತು ಅಬಕಾರಿ ಮಂಡಳಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

19 ವಸ್ತುಗಳ ಬೆಲೆ ಏರಿಸಿದ ಕೇಂದ್ರ ಸರ್ಕಾರ

ಕಳೆದ 15 ದಿನಗಳ ಹಿಂದಷ್ಟೇ ರೆಫ್ರಿಜರೇಟರ್‌, ಎಸಿ, ವಾಷಿಂಗ್‌ ಮೆಷಿನ್‌ಗಳು ಸೇರಿದಂತೆ ಒಟ್ಟು 19 ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.20ರಷ್ಟುಏರಿಕೆ ಮಾಡಿತ್ತು. ಈ ಮೂಲಕ ಕಳೆದ 15 ದಿನಗಳಲ್ಲಿ ಕೇಂದ್ರ ಸರ್ಕಾರ 2 ಬಾರಿ ಆಮದು ಸುಂಕ ಏರಿಸಿದಂತಾಗಿದೆ.

click me!