ಕೇಂದ್ರದಿಂದ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ನೂತನ ಕೇಡರ್ ನೀತಿ

Published : Aug 23, 2017, 07:56 PM ISTUpdated : Apr 11, 2018, 12:51 PM IST
ಕೇಂದ್ರದಿಂದ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ನೂತನ ಕೇಡರ್ ನೀತಿ

ಸಾರಾಂಶ

ದೇಶದ ಉನ್ನತ ಅಧಿಕಾರಿ ವರ್ಗದಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಖಚಿತಪಡಿಸಲು, ಕೇಂದ್ರ ಸರ್ಕಾರವು ಅಖಿಲ ಭಾರತೀಯ ಸೇವೆಗೆ ಆಯ್ಕೆಯಾಗುವ ಅಧಿಕಾರಿಗಳಿಗೆ ನೂತನ ಕೇಡರ್ ನೀತಿಯನ್ನು ಸಿದ್ಧಪಡಿಸಿದೆ. ಹಾಲಿ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳು ರಾಜ್ಯಾಧಾರಿತ ಕೇಡರ್’ನ್ನು ಆಯ್ಕೆ ಮಾಡುತ್ತಾರೆ. ಆದರೆ ಇನ್ಮುಂದೆ  ಅಖಿಲ ಭಾರತೀಯ ಸೇವೆಗಳಾದ ಐಎಎಸ್, ಐಪಿಎಸ್, ಹಾಗೂ ಐಎಫ್ಎಸ್ ಅಭ್ಯರ್ಥಿಗಳು ತಮ್ಮ ಕೇಡರ್’ನ್ನು ರಾಜ್ಯಗಳ ಬದಲಾಗಿ ವಲಯಗಳನ್ನು (ಝೋನ್) ಆಯ್ಕೆ ಮಾಡಬೇಕಾಗುವುದು.

ನವದೆಹಲಿ: ದೇಶದ ಉನ್ನತ ಅಧಿಕಾರಿ ವರ್ಗದಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಖಚಿತಪಡಿಸಲು, ಕೇಂದ್ರ ಸರ್ಕಾರವು ಅಖಿಲ ಭಾರತೀಯ ಸೇವೆಗೆ ಆಯ್ಕೆಯಾಗುವ ಅಧಿಕಾರಿಗಳಿಗೆ ನೂತನ ಕೇಡರ್ ನೀತಿಯನ್ನು ಸಿದ್ಧಪಡಿಸಿದೆ..

ಹಾಲಿ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳು ರಾಜ್ಯಾಧಾರಿತ ಕೇಡರ್’ನ್ನು ಆಯ್ಕೆ ಮಾಡುತ್ತಾರೆ. ಆದರೆ ಇನ್ಮುಂದೆ  ಅಖಿಲ ಭಾರತೀಯ ಸೇವೆಗಳಾದ ಐಎಎಸ್, ಐಪಿಎಸ್, ಹಾಗೂ ಐಎಫ್ಎಸ್ ಅಭ್ಯರ್ಥಿಗಳು ತಮ್ಮ ಕೇಡರ್’ನ್ನು ರಾಜ್ಯಗಳ ಬದಲಾಗಿ ವಲಯಗಳನ್ನು (ಝೋನ್) ಆಯ್ಕೆ ಮಾಡಬೇಕಾಗುವುದು.

ಈಗಿನ ವ್ಯವಸ್ಥೆಯಲ್ಲಿರುವ 26 ಕೇಡರ್’ಗಳನ್ನು 5 ವಲಯಗಳಲ್ಲಿ ವಿಂಗಡಿಸಲು ಕೇಂದ್ರ ಸಿಬ್ಬಂದಿ ಇಲಾಖೆಯು ನಿರ್ಧರಿಸಿದೆ.

ಆ ಪ್ರಕಾರ ವಲಯ-5 ರಲ್ಲಿ ಕರ್ನಾಟಕ, ತೆಲಾಂಗಣ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕೇರಳ ಕೇಡರ್’ಗಳಿರುವುವು.

ವಲಯ-1ರಲ್ಲಿ 7 ಕೇಡರ್’ಗಳು (ಅರುಣಾಚಲ ಪ್ರದೇಶ, ಗೋವಾ, ಮೀಝೋರಾಂ ಹಾಗೂ ಕೇಂದ್ರಾಡಳಿತ ಪ್ರದೇಶಗಳು), ವಲಯ-2ರಲ್ಲಿ  ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ ಮತ್ತು ಒಡಿಶಾ ಕೇಡರ್’ಗಳಿರುವುವು.

ವಲಯ-3ರಲ್ಲಿ ಗುಜರಾತ್, ಮಹಾರಾಷ್ಟ್ರ,  ಮಧ್ಯ ಪ್ರದೇಶ ಹಾಗೂ ಛತ್ತೀಸಗಢವಿದ್ದರೆ,  ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ-ಮೇಘಾಲಯ, ಮಣಿಪುರ, ತ್ರಿಪುರ ಮತ್ತು ನಾಗಾಲ್ಯಾಂಡ್ ಕೇಡರ್’ಗಳು ವಲಯ-4ರಲ್ಲಿ ಬರುತ್ತವೆ.  

ಹೊಸ ನೀತಿಯ ಪ್ರಕಾರ, ಅಭ್ಯರ್ಥಿಗಳ ಆದ್ಯತೆ ವಲಯಾಧಾರಿತವಾಗಿರಬೇಕು. ಒಂದು ವಲಯದಿಂದ ಒಂದು ರಾಜ್ಯವನ್ನು ಮಾತ್ರ ಅಭ್ಯರ್ಥಿಗಳು ಆಯ್ಕೆ ಮಾಡಬಹುದಾಗಿದೆ.  ಇತರ ಕೇಡರ್ ಆದ್ಯತೆಗಳನ್ನು ಕೂಡಾ ಬೇರೆ ಬೇರೆ ವಲಯಗಳಿಂದಲೇ ಆಯ್ಕೆ ಮಾಡಬೇಕಾಗುತ್ತದೆ.

ಸಾಮಾನ್ಯವಾಗಿ ಅಭ್ಯರ್ಥಿಗಳು ತಮ್ಮ ನೆರೆಹೊರೆಯ ರಾಜ್ಯ/ಕೇಡರ್’ಗಳನ್ನೇ ಆದ್ಯತೆಯಾಧಾರದಲ್ಲಿ ಆಯ್ಕೆ ಮಾಡುತ್ತಾರೆ. ಹೊಸ ವ್ಯವಸ್ಥೆಯಲ್ಲಿ ಆ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ.

ಹೊಸ ಕೇಡರ್ ನೀತಿಯಲ್ಲಿ ಅಧಿಕಾರಿಗಳು ದೇಶದ ಇತರ ಭಾಗಗಳಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ. ಆ ಮೂಲಕ ಅವರಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಲು ಸಹಕಾರಿಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೌದು ನಾನು ಟಿ ಮಾರಾಟಗಾರ, ಕಾಂಗ್ರೆಸ್ AI ವಿಡಿಯೋಗೆ ಸೂಕ್ತ ಸ್ಥಳದಲ್ಲಿ ತಿರುಗೇಟು ಕೊಟ್ಟ ಮೋದಿ
ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ