
ಬೆಂಗಳೂರು (ನ.17): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ಖಾಸಗಿ ವೈದ್ಯರ ವಿಧೇಯಕ ಮಂಡಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಕೆಪಿಎಂಇ ವಿಧೇಯಕ ಮಂಡನೆ ಖಚಿತ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಖಾಸಗಿ ವೈದ್ಯರ ಸಂಘದ ಪದಾಧಿಕಾರಿಗಳಿಗೆ ಹೇಳಿದ್ದಾರೆ. ವಿಧೇಯಕ ಮಂಡಿಸಬೇಡಿ ಅಂತ ಮಾತ್ರ ನೀವು ಹೇಳಬೇಡಿ. ತಿದ್ದುಪಡಿ ಏನು ಬೇಕೆಂದು ಹೇಳಿ ಆದರೆ ವಿಧೇಯಕ ಮಂಡನೆ ಬೇಡ ಎಂದು ಹೇಳಬೇಡಿ ಎಂದು ಖಾಸಗಿ ವೈದ್ಯರ ಸಂಘದ ಪದಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ, ಸಚಿವರಾದ K.R.ರಮೇಶ್ ಕುಮಾರ್, ಟಿ.ಬಿ.ಜಯಚಂದ್ರ, ಡಾ.ಶರಣ ಪ್ರಕಾಶ್ ಪಾಟೀಲ್, M.B.ಪಾಟೀಲ್, ಶಾಸಕ ಡಾ.ಸುಧಾಕರ್ ಹಾಗೂ ವೈದ್ಯ ಸಂಘದ ಪದಾಧಿಕಾರಿಗಳು ಇಂದು ಮಹತ್ವದ ಸಭೆ ನಡೆಸಿದ್ದಾರೆ.
ವಿಧೇಯಕದ ಅಂಶಗಳನ್ನು ಮನವರಿಕೆ ಮಾಡಿ ಸಮಸ್ಯೆ ಪರಿಹಾರಕ್ಕಾಗಿ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರು ಶತಪ್ರಯತ್ನ ಮಾಡಿದ್ದಾರೆ. ಜೈಲುಶಿಕ್ಷೆ ಅಂಶ ಒಂದನ್ನು ತೆಗೆದು ಬಿಡಿ. ಇನ್ನುಳಿದಿದ್ದು ಓಕೆ ಎಂದು ಖಾಸಗಿ ವೈದ್ಯರು ಹೇಳಿದ್ದಾರೆ. ಆದರೆ ಜೈಲು ಶಿಕ್ಷೆ ಅಂಶ ಏಕೆ ಬೇಡ? ರೋಗಿ ಸಾವಿಗೆ ಕಾರಣವಾದರೇ ನೀವು ಕೊಲೆಗಾರರಲ್ಲವೇ ಎಂದು ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.