
ನವದೆಹಲಿ(ನ.29): ಸತತ ಒಂಬತ್ತನೇ ದಿನವೂ ಸಂಸತ್ತಿನ ಕಲಾಪದಲ್ಲಿ ನೋಟಿನ ಗದ್ದಲ ಸದ್ದು ಮಾಡಿತ್ತು. ಆದರೆ, ಗದ್ದಲದ ನಡುವೆಯೂ ಹಣಕಾಸು ಸಚಿವ ಅರುಣ್ ಜೇಟ್ಲಿ ಆದಾಯ ತೆರಿಗೆ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಕೇಂದ್ರ ಸರ್ಕಾರ ಬತ್ತಳಕಿಯ ಹೊಸ ಅಸ್ತ್ರ ಕಾಳಧನಿಕರು ಮತ್ತಷ್ಟು ಕುಗ್ಗುವಂತಾಗಿ ಮಾಡಿದೆ.
ಕೇಂದ್ರದಿಂದ ಕಾಳಧನಿಕರಿಗೆ ಮತ್ತೊಂದು ಬಾಣ!: ಹೊಸ ಆದಾಯ ತೆರಿಗೆ ತಿದ್ದುಪಡಿ ಮಸೂದೆ ಮಂಡನೆ
ಸತತ 9 ನೇ ದಿನದ ಕಲಾಪದಲ್ಲೂ 500 ಮತ್ತು 1000 ಮುಖಬೆಲೆಯ ನೋಟ್ ಬ್ಯಾನ್ ಗದ್ದಲ-ಕೋಲಾಹಲ ಮುಂದುವರಿದಿತ್ತು. ಆದ್ರೆ, ಲೋಕಸಭೆಯಲ್ಲಿ ವಿಪಕ್ಷಗಳ ಗಲಾಟೆಯ ಮಧ್ಯೆಯೂ ಹಣಕಾಸು ಸಚಿವ ಅರುಣ್ ಜೇಟ್ಲಿ ಆದಾಯ ತೆರಿಗೆ ತಿದ್ದುಪಡಿ ಮಸೂದೆ ಮಂಡಿಸಿದರು. ಕಳೆದ ಗುರುವಾರವಷ್ಟೇ ಕೇಂದ್ರ ಸಂಪುಟ ಸಮಿತಿಯಲ್ಲಿ ಮಸೂದೆ ಮಂಡನೆಗೆ ಹಸಿರು ನಿಶಾನೆ ದೊರಕಿತ್ತು .
ವಿಧೇಯಕದ ಪ್ರಮುಖಾಂಶ:
1. ದಾಖಲೆ ರಹಿತ ಹಣವನ್ನು ಠೇವಣಿ ಮಾಡಿದರೆ ಒಟ್ಟು 50% ತೆರಿಗೆ ಕಟ್ಟಬೇಕು
2. 30% ತೆರಿಗೆ, 10% ದಂಡ, 10% ಅಧಿಕ ದಂಡ (ಅಂದರೆ 33% ತೆರಿಗೆ ಹಣದ ಮೊತ್ತ)
3. ಈಗ 10% ಅಧಿಕ ದಂಡವನ್ನು ಗರೀಬ್ ಕಲ್ಯಾಣ್ ಸೆಸ್ಗೆ ಕಟ್ಟಬೇಕು
4. ಜಮೆ ಮಾಡಿದ ಒಟ್ಟು ಹಣದಲ್ಲಿ ಕೇವಲ 50% ಮಾತ್ರ ಗ್ರಾಹಕರಿಗೆ ಲಭ್ಯ
1. ಉಳಿದ 25% ರಷ್ಟು ಪ್ರಧಾನಿ ಗರೀಬ್ ಕಲ್ಯಾಣ ಯೋಜನೆಗೆ
2. ಬಾಂಡ್ಗಳ ರೂಪದಲ್ಲಿ ೪ ವರ್ಷಗಳ ಕಾಲ ಈ ಹಣ ಬಳಕೆ
3. ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈ ಹಣವನ್ನು ಬಳಸುವುದು
4. ಇದು ಬಡ್ಡಿ ರಹಿತ ಠೇವಣಿಯಾಗಿದ್ದು, ಗ್ರಾಹಕ ೪ ವರ್ಷಗಳ ಕಾಲ ಹಣ ತೆಗೆಯುವಂತಿಲ್ಲ
1. ಸ್ವಯಂ ಪ್ರೇರಿತ ಜಮಾ ಮಾಡದೆ IT ದಾಳಿ ವೇಳೆ ಹಣ ಸಿಕ್ಕರೆ 85% ತೆರಿಗೆ
2. ದಾಖಲೆ ಸಹಿತ ಹಣವಿದ್ದಲ್ಲಿ ಸಾಮಾನ್ಯ ತೆರಿಗೆ ಜೊತೆ, 30% ದಂಡ
3. ದಾಖಲೆ ರಹಿತ ಹಣವಿದ್ದಲ್ಲಿ 60% ದಂಡದ ದುಪ್ಪಟ್ಟು ಹಣ ಕಟ್ಟಬೇಕು
ಲೋಕಸಭೆಯಲ್ಲಿ ಮೋದಿ ಸರ್ಕಾರದ ಬಹುಮತವಿದೆ. ಹೀಗಾಗಿ ತೆಗೆ ಮಸೂದೆ ಪಾಸಾಗುವ ಸಾಧ್ಯತೆಗಳಿಲ್ಲ. ಆದ್ರೆ, ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿದ್ರೂ ಮಸೂದೆ ತಿರಸ್ಕರಿಸಲು ಸಾಧ್ಯವಿಲ್ಲ. ಹೀಗಾಗಿ, ಕಪ್ಪು ಹಣವನ್ನ ವೈಟ್ ಮಾಡುವ ಸರ್ಕಾರದ ಈ ಹೊಸ ಯೋಜನೆಗೆ ಕಾಳಧನಿಕರು ಶರಣಾಗಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.