ಟ್ರ್ಯಾಕ್ಟರ್‌ಗೆ ಇನ್ಮುಂದೆ ಜೈವಿಕ ಇಂಧನ ಬಳಸಬಹುದು!

Published : Dec 05, 2018, 09:36 AM IST
ಟ್ರ್ಯಾಕ್ಟರ್‌ಗೆ ಇನ್ಮುಂದೆ ಜೈವಿಕ ಇಂಧನ ಬಳಸಬಹುದು!

ಸಾರಾಂಶ

ಜೈವಿಕ ಇಂಧನ ಮತ್ತು ಡೀಸೆಲ್‌ ಬಳಸಬಹುದಾದ ಟ್ರಾಕ್ಟರ್‌ ಮತ್ತು ಕಟ್ಟಡ ನಿರ್ಮಾಣದ ವಾಹನಗಳನ್ನು 1989ರ ಕೇಂದ್ರೀಯ ಮೋಟರ್‌ ವಾಹನ ನಿಯಮಕ್ಕೆ ಸೇರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. 

ನವದೆಹಲಿ[ಡಿ.05]: ಜೈವಿಕ ಇಂಧನ ವಾಹನಗಳ ಬಳಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜೈವಿಕ ಇಂಧನ ಮತ್ತು ಡೀಸೆಲ್‌ ಬಳಸಬಹುದಾದ ಟ್ರಾಕ್ಟರ್‌ ಮತ್ತು ಕಟ್ಟಡ ನಿರ್ಮಾಣದ ವಾಹನಗಳನ್ನು 1989ರ ಕೇಂದ್ರೀಯ ಮೋಟರ್‌ ವಾಹನ ನಿಯಮಕ್ಕೆ ಸೇರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಕೃಷಿಗೆ ಬಳಸಬಹುದಾದ ಟ್ರಾಕ್ಟರ್‌, ಪವರ್‌ ಟಿಲ್ಲರ್‌ಗಳು, ನಿರ್ಮಾಣ ಕೆಲಸಕ್ಕೆ ಬಳಸುವ ವಾಹನಗಳನ್ನು ಸಹ ಇನ್ನು ಮುಂದಿನ ದಿನಗಳಲ್ಲಿ ಜೈವಿಕ ಇಂಧನ ಬಳಕೆಯ ವಾಹನಗಳಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ನೂತನ ಅಧಿಸೂಚನೆ ಪ್ರಕಾರ ಡೀಸೆಲ್‌ ಅನ್ನು ಪ್ರಾಥಮಿಕ ಇಂಧನವಾಗಿ ಹಾಗೂ ಸಿಎನ್‌ಜಿ, ಬಯೋ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ಇಂಧನವನ್ನು ಸೆಕೆಂಡರಿ ಇಂಧನವನ್ನಾಗಿ ಬಳಸಬಹುದಾಗಿದೆ.

ಹಾಗಾಗಿ, ಟ್ರಾಕ್ಟರ್‌ ಸೇರಿದಂತೆ ಇತರ ವಾಹನಗಳನ್ನು ನೈಸರ್ಗಿಕ ಇಂಧನದ ವಾಹನಗಳಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು