ಅಕ್ಟೋಬರ್’ನಲ್ಲಿ  ‘ಮೀಸಲಾತಿ ವಿರೋಧಿ ರಾಜ್ಯಪಾಲ ಹಠಾವೋ’ ಪ್ರತಿಭಟನೆ

By Suvarna Web DeskFirst Published Sep 18, 2017, 4:37 PM IST
Highlights

ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿ ನೀಡುವ ವಿಚಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಮಾಡದೇ ಇರುವ ವಿಚಾರದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ಅಕ್ಟೋಬರ್ ತಿಂಗಳಲ್ಲಿ ‘ಮೀಸಲಾತಿ ವಿರೋಧಿ ರಾಜ್ಯಪಾಲ ಹಠಾವೋ’ ರಾಜ್ಯವ್ಯಾಪ್ತಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರಜಾ ಪರಿವರ್ತನಾ ವೇದಿಕೆ ಕರ್ನಾಟಕ(ಪಿಪಿವಿ) ರಾಜ್ಯಾಧ್ಯಕ್ಷ ಬಿ. ಗೋಪಾಲ್ ಹೇಳಿದ್ದಾರೆ.

ಮಂಗಳೂರು: ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿ ನೀಡುವ ವಿಚಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಮಾಡದೇ ಇರುವ ವಿಚಾರದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ಅಕ್ಟೋಬರ್ ತಿಂಗಳಲ್ಲಿ ‘ಮೀಸಲಾತಿ ವಿರೋಧಿ ರಾಜ್ಯಪಾಲ ಹಠಾವೋ’ ರಾಜ್ಯವ್ಯಾಪ್ತಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರಜಾ ಪರಿವರ್ತನಾ ವೇದಿಕೆ ಕರ್ನಾಟಕ(ಪಿಪಿವಿ) ರಾಜ್ಯಾಧ್ಯಕ್ಷ ಬಿ. ಗೋಪಾಲ್ ಹೇಳಿದ್ದಾರೆ.

ಮಂಗಳೂರಿನ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ಎಸ್‌ಸಿ ಎಸ್‌ಟಿ ನೌಕರರ, ನೌಕರಿ ಮತ್ತು ಭಡ್ತಿ ಮೀಸಲಾತಿ ಕುರಿತು ವಿಚಾರ ಸಂಕಿರಣಕ್ಕೆ ಮುನ್ನ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರತ್ನಪ್ರಭಾ ಸಮಿತಿ ವರದಿಯಲ್ಲಿ ಉಲ್ಲೇಖ ಮಾಡಿದಂತೆ ರಾಜ್ಯಮಟ್ಟದಲ್ಲಿರುವ ಖಾಲಿ ಇರುವ ಎಸ್‌ಸಿ, ಎಸ್‌ಟಿ ಬ್ಯಾಕ್‌ಲಾಕ್ ಹುದ್ದೆಗಳನ್ನು ವಿವರಗಳನ್ನು ಸುಪ್ರೀಂ ಕೋರ್ಟ್‌ನ ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಲಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಮಸೂದೆ ಮಾಡಿ ಮೀಸಲಾತಿ ವಿರೋಧಿ ಧೋರಣೆಗೆ ಮುಕ್ತಿ ಸಿಗುವಂತೆ ಮಾಡಬೇಕಾಗಿದೆ ಎಂದು ಅವರು ಆಗ್ರಹಿಸಿದರು.

ಮೀಸಲಾತಿ ಎಂದರೆ ಅದು ಬರೀ ಪ್ರಾತಿನಿಧ್ಯ ಮಾತ್ರ. ಇದರ ಮೂಲಕ ಬಡತನ ನಿವಾರಣೆಯಾಗೋದಿಲ್ಲ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಈ ಹಿಂದುಳಿಯಲು ಕಾರಣವನ್ನು ತೋರಿಸಿಲ್ಲ ಎಂದು ಹೇಳಿದೆ. ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಈ ವಿಚಾರ ನಡೆಯುತ್ತಿರುವಾಗ ರಾಜ್ಯಮಟ್ಟದಲ್ಲಿರುವ ಎಸ್‌ಸಿ, ಎಸ್‌ಟಿ ಕೆಡರ್ ವೈಸ್ ಡೇಟಾವನ್ನುನೀಡಿಲ್ಲ. ಈ ಕುರಿತು ರಾಜ್ಯ ಮಟ್ಟದಲ್ಲಿ ಮಾ.23ರಂದು ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಮೀಸಲಾತಿಯ ಕುರಿತು ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವಂತೆ ಮನವಿಯನ್ನು ಮಾಡಲಾಗಿತ್ತು. ಸರ್ಕಾರ ಇದನ್ನು ರಾಜ್ಯಪಾಲರಿಗೆ ಕಳುಹಿಸಿದರೂ ಅವರು ಇನ್ನೂ ಕೂಡ ಸಹಿ ಮಾಡಿಲ್ಲ ಎಂದು ಅವರು ಆರೋಪಿಸಿದರು.

ಎಲ್ಲ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ: ಸರ್ಕಾರಿ ಕೆಲಸಗಳಲ್ಲಿ ಎಸ್‌ಸಿ ಹಾಗೂ ಎಸ್‌ಟಿಗಳಿಗೆ ಮೀಸಲಾತಿ ಕೇವಲ ಪ್ರಾತಿನಿಧಿಕವಾಗಿದೆ. ಈ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದರು.

1978ಕ್ಕಿಂತ ಮೊದಲು ಎಸ್‌ಸಿ, ಎಸ್‌ಟಿಗಳಿಗೆ ಸರ್ಕಾರಿ ಕೆಲಸಗಳಲ್ಲಿ ಮೀಸಲಾತಿ ಆರಂಭವಾಯಿತು. ಅದಕ್ಕಿಂತ ಮೊದಲು ಮೀಸಲಾತಿಯ ಪ್ರಮಾಣ ಸಾಕಷ್ಟು ಕಡಿಮೆ ಇತ್ತು. ಈಗ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಪವಿತ್ರ ವರ್ಸಸ್ ಕರ್ನಾಟಕ ಸರ್ಕಾರ ವಿಚಾರದಲ್ಲಿ ಬಡ್ತಿ ಮೀಸಲಾತಿ ಮುಂದುವರಿಸಬಾರದು ಎನ್ನುವ ತೀರ್ಪು ನೀಡಿದೆ. ಇದಲ್ಲದೆ ಎಸ್‌ಸಿ, ಎಸ್‌ಟಿಗಳು ಸರ್ಕಾರಿ ನೌಕರಿಯನ್ನು ಕದಿಯುತ್ತಿದ್ದಾರೆ.

ಮೀಸಲಾತಿಯಿಂದ ಜಾತೀಯತೆ ಮುಂದುವರಿಯುತ್ತದೆ. ಜೊತೆಗೆ ಅವರು ಸರಿಯಾಗಿ ಕೆಲಸ ಮಾಡೋದಿಲ್ಲ ಎನ್ನುವ ಮಾತನ್ನು ಈ ಪೀಠ ತನ್ನ ತೀರ್ಪಿನಲ್ಲಿ ನೀಡಿದೆ. ಇದು ಸರಿಯಲ್ಲ ಎಂದರು.

ದ.ಕ. ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಸುಂದರ್ ನಿಡ್ಪಳ್ಳಿ, ನಿವೃತ್ತ ಬ್ಯಾಂಕ್ ಮೆನೇಜರ್  ಮಹಾಬಲ ಮೂಡುಬಿದಿರೆ, ಮೊಗೇರ ಸಂಘ ಮಂಗಳೂರು ರಾಜ್ಯಾಧ್ಯಕ್ಷ ಸುಂದರ್ ಮೇರ

ಇದ್ದರು.

 

click me!