
ನವದೆಹಲಿ (ಡಿ.16): ಕಾಳಧನ ಹೊಂದಿರುವವರ ಮಾಹಿತಿಯನ್ನು ಸರ್ಕಾರಕ್ಕೆ ನೀಡುವುದು ಇನ್ಮುಂದೆ ಸುಲಭ! ನಿಮ್ಮ ಸುತ್ತಮುತ್ತ ಯಾರಾದರೂ ಕಪ್ಪುಹಣ ಹೊಂದಿದ್ದಾರೆನ್ನುವ ಮಾಹಿತಿ ಸಿಕ್ಕರೆ ಒಂದು ಮೇಲ್ ಮಾಡಿದರೆ ಸಾಕು ತೆರಿಗೆ ಅಧಿಕಾರಿಗಳನ್ನು ತಲುಪಿ ಬಿಡುತ್ತದೆ. ಇದಕ್ಕಾಗಿಯೇ ಸರ್ಕಾರ ಈ ಮೇಲ್ ಐಡಿಯನ್ನು ಕ್ರಿಯೇಟ್ ಮಾಡಿದ್ದು ನೀವಿದಕ್ಕೆ ಮಾಹಿತಿಯನ್ನು ಕಳುಹಿಸಬಹುದು.
ತೆರಿಗೆ ಅಧಿಕಾರಿಗಳಿಗೆ ಕಾಳಧನಿಕರ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಸಾರ್ವಜನಿಕರಿಗಾಗಿ ನೂತನ ಮೇಲ್ ಐಡಿಯನ್ನು ಮಾಡಲಾಗಿದೆ ಎಂದು ಆದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅದಿಯಾ ಹೇಳಿದ್ದಾರೆ.
blackmoneyinfo@incometax.gov.in ಈ ವಿಳಾಸಕ್ಕೆ ಮೇಲ್ ಮಾಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಅಡಿಯಲ್ಲಿ ಇದನ್ನು ಘೋಷಿಸಲಾಗಿದೆ. ಗರೀಬ್ ಕಲ್ಯಾಣ್ ಯೋಜನೆಗೆ
ಜನ ಸೇರುವುದರ ಮೂಲಕ ಬಡವರ ಕಲ್ಯಾಣಕ್ಕೆ ಕೊಡುಗೆ ನೀಡುವ ಉದ್ದೇಶಕ್ಕಾಗಿ ಮೇಲ್ ಐಡಿಯನ್ನು ಮಾಡಲಾಗಿದೆ ಎಂದು ಹಸ್ಮುಖ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.