ಎಸ್'ಬಿಐ ಬ್ಯಾಂಕ್ ಬಳಿಕ ಇದೀಗ ಪಿಎಸ್'ಯು ಬ್ಯಾಂಕ್'ಗಳ ವಿಲೀನ..!

By Suvarna Web DeskFirst Published Dec 25, 2017, 11:17 AM IST
Highlights

ಎಸ್‌ಬಿಐ ಬ್ಯಾಂಕುಗಳ ವಿಲೀನದ ನಂತರ ಇತ್ತೀಚೆಗೆ ಪಿಎಸ್‌ಯು ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗುತ್ತದೆ ಎಂದು ಹೇಳುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಿದು ನಿಜವೆ..?

ನವದೆಹಲಿ (ಡಿ.25): ಎಸ್‌ಬಿಐ ಬ್ಯಾಂಕುಗಳ ವಿಲೀನದ ನಂತರ ಇತ್ತೀಚೆಗೆ ಪಿಎಸ್‌ಯು ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗುತ್ತದೆ ಎಂದು ಹೇಳುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಕೆಲ ಸುದ್ದಿ ವಾಹಿನಿಗಳೂ ಈ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಅಲ್ಲದೆ ವಾಟ್ಸ್ಆ್ಯಪ್‌ಗಳಲ್ಲಿ ಹೆಚ್ಚಾಗಿ ಹರಿದಾಡುತ್ತದೆ.

ವಾಟ್ಸ್‌ಆಪ್‌ಗಳಲ್ಲಿ ಹರಿದಾಡುವ ಸಂದೇಶದಲ್ಲಿ ‘ಒಂಬತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಅವುಗಳೆಂದರೆ ಕಾರ್ಪೋ ರೇಶನ್ ಬ್ಯಾಂಕ್, ಯೂಕೋ ಬ್ಯಾಂಕ್, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಮಹರಾಷ್ಟ್ರ, ಆಂದ್ರ ಬ್ಯಾಂಕ್,

ಇಂಡಿಯನ್ ಓವರ್ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ದೇನಾ ಬ್ಯಾಂಕ್‌ಗಳನ್ನು ವಿಲೀನ ಮಾಡಿ ಬ್ಯಾಂಕ್ ಆಫ್ ಇಂಡಿಯಾ ಎಂದು ಪುನರ್ ನಾಮಕರಣ ಮಾಡಲಾಗುತ್ತದೆ. ಹಾಗಾಗಿ ಈ ಬ್ಯಾಂಕುಗಳಲ್ಲಿ ಹಣ ಇಟ್ಟವರು ಎಚ್ಚರದಿಂದಿರಿ ಎಂದು ವಾಟ್ಸ್ ಆಪ್‌ಗಳಲ್ಲಿ ಸಂದೇಶಗಳನ್ನು ಹರಿಬಿಡಲಾಗಿದೆ. ಈ ಸಂದೇಶವು ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ.

ಹಾಗಾದರೆ ನಿಜಕ್ಕೂ ಬ್ಯಾಂಕುಗಳನ್ನು ವಿಲೀನ ಮಾಡಲಾಗುತ್ತದೆಯೇ ಎಂದು ತಿಳಿಯಹೊರಟಾಗ ಬಯಲಾದ ಸತ್ಯವೇ ಬೇರೆ.  ಪಿಎಸ್‌ಬಿ ಬ್ಯಾಂಕುಗಳನ್ನು ಮುಚ್ಚುವ ವರದಿಯು ಹಾಸ್ಯಾಸ್ಪದ ಮತ್ತು ಆಧಾರ ವಿಲ್ಲದ್ದು ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಪ್ರಸ್ತುತ ಬ್ಯಾಂಕುಗಳು ಹೆಚ್ಚಿನ ಸಾಲ ಮತ್ತು ಬಂಡವಾಳದ ಕೊರತೆಯಿಂದ ದುರ್ಬಲವಾಗಿರುವುದರಿಂದ ಆರ್‌ಬಿಐ ಅವುಗಳನ್ನು ಸರಿಪಡಿಸುವ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ.

click me!