
ಮಂಗಳೂರು (ಡಿ.01): ಓಖಿ ಚಂಡಮಾರುತದ ರಕ್ಕಸ ಅಲೆಗಳ ಅಬ್ಬರದಿಂದ ಮಂಗಳೂರಿನಿಂದ ಹೊರಟಿದ್ದ 2 ಹಡಗುಗಳು ಲಕ್ಷದ್ವೀಪ ಬಳಿಯ ಕವರತಿ ಬಳಿ ಮುಳುಗಡೆಯಾಗಿದೆ.
ಎರಡು ಹಡಗುಗಳಲ್ಲಿ ದಿನಸಿ, ತರಕಾರಿ, ಜಲ್ಲಿಯನ್ನು ಸಾಗಿಸಲಾಗುತ್ತಿತ್ತು. ಎರಡು ಹಡಗುಗಳಲ್ಲಿ 14 ಸಿಬ್ಬಂದಿಗಳಿದ್ದರು. ಹೆಲಿಕಾಪ್ಟರ್ ಮೂಲಕ ನೌಕಾದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು ನಾಲ್ವರನ್ನು ರಕ್ಷಿಸಲಾಗಿದೆ. ಉಳಿದ 10 ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಓಕ್ಲಿ ಚಂಡಮಾರುತಕ್ಕೆ ಸಿಕ್ಕಿ ಕೇರಳ ಹಾಗೂ ತಮಿಳುನಾಡಿನ ಬೋಟ್'ಗಳು ಸಹ ನಿನ್ನೆ ಮುಳುಗಿವೆ. ಅದರ ಒಂದು ದೃಶ್ಯ
ಕನ್ಯಾಕುಮಾರಿಯಲ್ಲಿ ನಿನ್ನೆ ನಾಪತ್ತೆಯಾದ ಹಡಗು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.