ಹಗರಣವೋ, ಉಳಿತಾಯವೋ?: ರಫೆಲ್ ಗಾಗಿ ಮೋದಿ ಪ್ಲ್ಯಾನ್ ಏನು?

Published : Jul 25, 2018, 07:07 PM IST
ಹಗರಣವೋ, ಉಳಿತಾಯವೋ?: ರಫೆಲ್ ಗಾಗಿ ಮೋದಿ ಪ್ಲ್ಯಾನ್ ಏನು?

ಸಾರಾಂಶ

ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ? ಸರ್ಕಾರಿ ವರದಿ ಹೇಳುವ ಕತೆಯೇ ಬೇರೆ ಕಡಿಮೆ ವೆಚ್ಚದಲ್ಲಿ ರಫೆಲ್ ತಮ್ಮದಾಗಿಸಿಕೊಂಡ ಮೋದಿ ಯುಪಿಎ ಸರ್ಕಾರ ಮಾಡಲಿದ್ದ ಖರ್ಚು ಎಷ್ಟು? ಕಡಿಮೆ ವೆಚ್ಚದ ಒಪ್ಪಂದಕ್ಕೆ ಮುನ್ನುಡಿ ಬರೆದ ಮೋದಿ

ನವದೆಹಲಿ(ಜು.25): ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಸರ್ಕಾರಿ ಕಡತಗಳು ಹೇಳುತ್ತಿರುವ ಕತೆಯೇ ಬೇರೆ ಇದೆ. ರಫೆಲ್ ಒಪ್ಪಂದದಲ್ಲಿ ಹಗರಣವಲ್ಲ ಬದಲಿಗೆ ಭಾರತಕ್ಕೆ ಲಾಭವಾಗುವಂತ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದು ಸರ್ಕಾರಿ ಕಡತಗಳಿಂದ ತಿಳಿದು ಬರುತ್ತದೆ.

ಫ್ರಾನ್ಸ್ ನಿಂದ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಯುಪಿಎ ಅವಧಿಯಲ್ಲಿ ನಡೆದಿತ್ತು. ಆದರೆ ಪ್ರಧಾನಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಈ ಒಪ್ಪಂದದಲ್ಲಿ ಕೆಲವು ಮಾರ್ಪಾಡು ಮಾಡುವ ಮೂಲಕ ಭಾರತಕ್ಕೆ ಲಾಭವಾಗುವಂತೆ ನೋಡಿಕೊಳ್ಳಲಾಗಿದೆ.

ಪ್ರಮುಖವಾಗಿ ಪ್ರತೀ ರಫೆಲ್ ಖರೀದಿಯಲ್ಲಿ 39 ಕೋಟಿ ರೂ. ಉಳಿತಾಯಕ್ಕೆ ಮೋದಿ ಮುನ್ನುಡಿ ಬರೆದಿದ್ದಾರೆ ಎಂಬುದು ದಾಖಲೆಗಳಿಂದ ತಿಳಿಯುತ್ತದೆ. ಅಂದರೆ ಯುಪಿಎ ಸರ್ಕಾರ ಪ್ರತೀ ರಫೆಲ್ ಯುದ್ಧ ವಿಮಾನಕ್ಕೆ ಖರ್ಚು ಮಾಡಲು ಉದ್ದೇಶಿಸಿದ್ದ ಹಣಕ್ಕಿಂತ 59 ಕೋಟಿ ರೂ. ಕಡಿಮೆ ವೆಚ್ಚದಲ್ಲಿ ರಫೆಲ್ ಭಾರತದ ಪಾಲಾಗುತ್ತಿದೆ.

ಯುಪಿಎ ಸರ್ಕಾರ 36 ರಫೆಲ್ ಯುದ್ಧ ವಿಮಾನಗಳಿಗೆ ಒಟ್ಟು 1.69 ಲಕ್ಷ ಕೋಟಿ ರೂ. ಖರ್ಚು ಮಾಡಲಿತ್ತು. ಆದರೆ ಪ್ರಧಾನಿ ಮೋದಿ 36 ಯುದ್ಧ ವಿಮಾನಗಳಿಗೆ ಕೇವಲ 59 ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದಾರೆ.

ಈ ಕುರಿತು ರಕ್ಷಣಾ ಇಲಾಖೆ ಮತ್ತು ಭಾರತೀಯ ವಾಯುಪಡೆ ತಯಾರಿಸಿರುವ ವರದಿಯಲ್ಲಿ ಸ್ಪಷ್ಟ ಉಲ್ಲೇಖವಿದ್ದು, ವಿಮಾನ ಖರೀದಿ ಬಳಿಕ ಅದರ ನಿರ್ವಹಣೆ ಮೇಲಿನ ವೆಚ್ಚದಲ್ಲೂ ಕಡಿಮೆ ಮಾಡಲು ಫ್ರಾನ್ಸ್ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ದೇಶದ ರಕ್ಷಣೆಗಾಗಿ ರಫೆಲ್ ಯುದ್ಧ ವಿಮಾನದ ಅವಶ್ಯಕತೆ ಇದೆಯಾದರೂ, ಅದನ್ನು ಆದಷ್ಟು ಕಡಿಮೆ ವೆಚ್ಚದಲ್ಲಿ ತನ್ನದಾಗಿಸಿಕೊಳ್ಳಲು ಮೋದಿ ಸರ್ಕಾರ ಯಶಸ್ವಿ ಒಪ್ಪಂದ ಮಾಡಿಕೊಂಡಿದೆ ಎಂಬುದು ಈ ಅಂಕಿ ಅಂಶಗಳಿಂದ ಗೊತ್ತಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?