ಆರ್ಥಿಕ ಅಪರಾಧಿಗಳನ್ನು ಮಟ್ಟಹಾಕಲು ಕೇಂದ್ರದಿಂದ ವಿಧೇಯಕ: ಮಲ್ಯ, ನೀರವ್ ಪ್ರಕರಣಗಳಿಂದ ಎಚ್ಚೆತ್ತ ಸರ್ಕಾರ

By Suvarna Web deskFirst Published Mar 1, 2018, 8:51 PM IST
Highlights

ದೇಶದಹೊರಗಿರುವಆಸ್ತಿಗಳನ್ನುವಶಪಡಿಸಿಕೊಳ್ಳಬಹುದು. ಆದರೆಇದಕ್ಕೆದೇಶದಸಹಕಾರಅಗತ್ಯವಾಗಿರುತ್ತದೆ

ನವದೆಹಲಿ(ಮಾ.01): ಆರ್ಥಿಕ ಅಪರಾಧಿಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರವು ನೂತನ ವಿಧೇಯಕ ಮಂಡಿಸಿದೆ. ಆರ್ಥಿಕ ಅಪರಾಧ ನಿಯಂತ್ರಣ ವಿಧೇಯಕ 2018ಕ್ಕೆ ಸಂಪುಟ ಸಮಿತಿ ಸಮ್ಮತಿ ಸೂಚಿಸಿದೆ.

ವಿಜಯ್ ಮಲ್ಯ, ನೀರವ್ ಮೋದಿ ರೀತಿಯ ಪ್ರಕರಣಗಳಿಂದ ಕೇಂದ್ರ ಸರ್ಕಾರ ಎಚ್ಚತ್ತಿದ್ದು, ಆರ್ಥಿಕ ಅಪರಾಧಿಗಳನ್ನು ಸದೆಬಡೆಯಲು ನೂತನ ಕಾನೂನು ಜಾರಿಗೊಳಿಸಲಾಗಿದೆ.

ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಹಣಕಾಸು ವಂಚಕರ ವಿರುದ್ಧ ಕೇಂದ್ರ ಸಮರ ಸಾರಿದೆ. ಸಾಲ ಕಟ್ಟದೇ ದೇಶ ಬಿಡುವವರನ್ನು ದ್ರೋಹಿಗಳೆಂದು ಘೋಷಣೆ ಮಾಡಲಾಗುತ್ತದೆ. 6 ವಾರದೊಳಗೆ ಬ್ಯಾಂಕ್​​ಗಳಿಗೆ ಸಾಲಪಾವತಿಸದಿದ್ದರೆ ಆಸ್ತಿ ಜಪ್ತಿಗೊಳಿಸಲಾಗುವುದು.  ದೇಶದ ಹೊರಗಿರುವ ಆಸ್ತಿಗಳನ್ನು ವಶಪಡಿಸಿಕೊಳ್ಳಬಹುದು. ಆದರೆ ಇದಕ್ಕೆ ಆ ದೇಶದ ಸಹಕಾರ ಅಗತ್ಯವಾಗಿರುತ್ತದೆ' ಎಂದರು.

ಸುಸ್ತಿದಾರ, ಮೋಸ. ನಕಲಿ ಹಾಗೂ ಠೇವಣಿಗಳ ಮರುಪಾವತಿ ಸೇರಿದ ಅಪರಾಧಗಳನ್ನು ಒಳಗೊಂಡಿರುತ್ತವೆ.  ನಿಗದಿತ  ಅಪರಾಧಕ್ಕೆ ಸಂಬಂಧಿಸಿದಂತೆ ದೇಶ ಬಿಟ್ಟು ಹೋದರೆ ಅಥವಾ ಕ್ರಿಮಿನಲ್ ಮೊಕದ್ದಮೆ ತಪ್ಪಿಸಲು ದೇಶ ಬಿಟ್ಟಿದ್ದರೆ ಅಥವಾ ಮೊಕದ್ದಮೆ ಎದುರಿಸಲು ಭಾರತಕ್ಕೆ ಆಗಮಿಸಲು ನಿರಾಕರಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸಾಲ ಪಾವತಿಸದ ಉದ್ಯಮಿಗಳ ಆಸ್ತಿ ಮುಟ್ಟುಗೋಲಿಗೆ ಕಾನೂನು ಜಾರಿಗೊಳಿಸಲಾಗಿದೆ. ಹಣಕಾಸು ವಂಚಕರ ಪ್ರಕರಣಗಳನ್ನು ವಿಶೇಷ ಕೋರ್ಟ್​ನಲ್ಲೇ ವಿಚಾರಣೆ ನಡೆಸಲಾಗುತ್ತದೆ. ಮನಿ ಲಾಂಡರಿಂಗ್​ ಕಾಯ್ದೆಯಡಿ ವಂಚಕರ ಪ್ರಕರಣಗಳನ್ನು ವಿಚಾರಣೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

click me!