ಕಾಂಗ್ರೆಸ್’ನ ನಮೋ (ನಮಗೆ ಮೋಸ)ಕ್ಕೆ ಬಿಜೆಪಿಯಿಂದ ‘ದಿಗು’

By Suvarna Web DeskFirst Published Mar 1, 2018, 7:57 PM IST
Highlights
  • ನಮೋ ಎಂದರೆ ‘ನಮಗೆ ಮೋಸ’ ಎಂದು ವ್ಯಾಖ್ಯಾನಿಸಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಸೀದಾ ರುಪಯ್ಯಾ ಎಂದು ವ್ಯಾಖ್ಯಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು:  ನಮೋ ಎಂದರೆ ‘ನಮಗೆ ಮೋಸ’ ಎಂದು ವ್ಯಾಖ್ಯಾನಿಸಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಬಿಜೆಪಿ ಗರಂ ಆಗಿದ್ದು ಈ ರೀತಿ ಪ್ರತಿಕ್ರಿಯಿಸಿದೆ.

'ದಿಗು' ಎಂದರೆ 'ದಿಕ್ಕೆಟ್ಟ ಗುಲಾಮ'

'ದಿಗು' ರವರೆ, ಗಾಂಧಿ ಕುಟುಂಬದ ಗುಲಾಮಗಿರಿ ಬಿಟ್ಟು, ಕನ್ನಡಿಗರಂತೆ ಸ್ವಾಭಿಮಾನದಿಂದ ಬುದುಕುವುದನ್ನು ಕಲಿಯಿರಿ.

ಇನ್ನೂ ನೀವೊಬ್ಬ ಯುವ ನಾಯಕ ಎಂಬ ಭ್ರಮೆಯಿಂದ ಹೊರಬಂದು ಪ್ರಬುದ್ಧ ರಾಜಕೀಯವನ್ನು ಇನ್ನಾದರೂ ಕಲಿಯಿರಿ. https://t.co/GXyVL1d5rS

— BJP Karnataka (@BJP4Karnataka)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಸೀದಾ ರುಪಯ್ಯಾ ಎಂದು ವ್ಯಾಖ್ಯಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರ್ಜರಿ ತಿರುಗೇಟು ನೀಡಿರುವ ಕಾಂಗ್ರೆಸ್, ನಮೋ (ನರೇಂದ್ರ ಮೋದಿ) ಎಂಬುದನ್ನು ‘ನಮಗೆ ಮೋಸ’ ಎಂದು ವ್ಯಾಖ್ಯಾನಿಸುವ ಮೂಲಕ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡುತ್ತ ಬಂದಿದೆ ಎಂದು ಹೇಳಿತ್ತು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ದೇಶದ ಬ್ಯಾಂಕ್‌ಗಳ ಹಣ ವನ್ನು ಲಪಟಾಯಿಸಿಕೊಂಡು ಹೋಗಲು ವಂಚಕ ಉದ್ಯಮಿಗಳಿಗೆ ಮೋದಿ ಅವಕಾಶ ಕೊಟ್ಟಿದ್ದಾರೆ. ಇಂತಹ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಬಂದು ಅಷ್ಟು ದುಡ್ಡು ಕೊಟ್ಟಿದ್ದೇವೆ, ಇಷ್ಟು ದುಡ್ಡು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಏಕೆಂದರೆ, ಕೇಂದ್ರದಿಂದ ಅವರು ಹೇಳುತ್ತಿರುವಷ್ಟು ಹಣ ರಾಜ್ಯಕ್ಕೆ ಇನ್ನೂ ಬಂದೇ ಇಲ್ಲ. ಹೀಗಿದ್ದರೂ ಸುಳ್ಳು ಹೇಳುವ ಮೂಲಕ ನಮೋ (ನಮಗೆ ಮೋಸ) ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

click me!