
ಬೆಂಗಳೂರು(ಅ.31):ಇಡೀ ರಾಷ್ಟ್ರವನ್ನೇ ಬೆಚ್ಚಿಬಿಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.. ಪ್ರಶ್ನೆಯಾಗೆ ಉಳಿದಿದ್ದ ಹತ್ಯೆಯ ಹಿಂದಿನ ಹಂತಕರ ಜಾಡು ಹಿಡಿದ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ.. ಯಾವುದೇ ಸಂಘಟನೆಗೂ ಸೇರದ ಆ ಪ್ರೊಫೆಷನಲ್ ಶೂಟರ್ಸ್ಗಳ ಬೆನ್ನತ್ತಿರುವ ಎಸ್ಐಟಿ ತಂಡ ಈಗ ಹಂತಕರ ಸಂಪೂರ್ಣ ನೆಟ್ವರ್ಕ್ಗಳನ್ನು ಜಾಲಾಡುತ್ತಿದೆ..
ಘಟನೆ ನಡೆದು ಇವತ್ತಿಗೆ 55 ದಿನಗಳೇ ಕಳೆದಿವೆ.. ಇಲ್ಲಿಯವರೆಗೂ ಕೂಡ ಆ ಕೃತ್ಯ ಎಸಗಿದವರ್ಯಾರು ಎಂಬ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.. ಘಟನೆ ನಡೆದ ಸ್ಥಳ ಸೇರಿದಂತೆ ಹಲವು ಕಡೆಗಳ ಸುಮಾರು 300ಕ್ಕೂ ಹೆಚ್ಚು ಸಿಸಿಟಿವಿಗಳ ವಶಕ್ಕೆ ಪಡೆದು ತನಿಖೆ ನಡೆಸಿದ ಪೊಲೀಸರು ಶಂಕಿತ ಆರೋಪಿಯ ಸಿಸಿಟಿವಿ ದೃಶ್ಯವನ್ನು ಕೂಡ ರಿಲೀಸ್ ಮಾಡಿದ್ರು.. ಅಲ್ಲದೆ, ಆರೋಪಿಗಳ ರೇಖಾ ಚಿತ್ರವನ್ನು ಕೂಡ ಬಿಡುಗಡೆ ಮಾಡಿ ಆರೋಪಿಗಳ ಸುಳಿವು ನೀಡುವಂತೆ ಮಾಹಿತಿ ಕೊರಿತ್ತು.. ಮೇಲ್ನೋಟಕ್ಕೆ ಇನ್ನು ಕೂಡ ಹಂತಕರ ಸುಳಿವು ಪತ್ತೆಯಾಗಿಲ್ಲ ಎಂದುರೂ ಕೂಡ ಮೂಲಗಳ ಪ್ರಕಾರ ಈಗಾಗಲೇ ಎಸ್ಐಟಿಗೆ ಹಂತಕರ ಸುಳಿವು ಸಿಕ್ಕಿದೆ ಎನ್ನುತ್ತಿದೆ..
ಎಸ್ಐಟಿ ಬಳಿಯಿದೆ ಗೌರಿ ಲಂಕೇಶ್ ಹಂತಕರ ಡಿಟೈಲ್ಸ್ ?
ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಎಸ್ಐಟಿ ತಂಡ ಕೊನೆಗೂ ಹಂತಕರ್ಯರು ಎಂಬುದ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.. ಪ್ರಾರಂಭದಲ್ಲಿ ಗೌರಿ ಲಂಕೇಶ್ ಹತ್ಯೆಯ ಹಿಂದೆ ಮೂರು ರೀತಿಯ ಕಾರಣಗಳಿರಬಹುದೆಂದು ಶಂಕಿಸಲಾಗಿತ್ತು . ಅದರಂತೆ ನಕ್ಸಲ್ ಕೈವಾಡದ ಬಗ್ಗೆ , ವೈಯಕ್ತಿಕ ಕಾರಣ ಹಾಗೂ ಸೈಧಾಂತಿಕ ಹಿನ್ನಲೆಯಲ್ಲಿ ಹತ್ಯೆ ನಡೆದಿದೆಯೇ ಎಂದು ತನಿಖೆ ಪ್ರಾರಂಭಿಸಲಾಗಿತ್ತು.. ಆದರೆ ಪ್ರಾರಂಭದಲ್ಲೇ ಪೊಲೀಸರಿಗೆ ಪ್ರಕರಣದಲ್ಲಿ ನಕ್ಸಲರ ಕೈವಾಡವಿಲ್ಲ ಎಂದು ಹಾಗೂ ಕೃತ್ಯದಲ್ಲಿ ಯಾವುದೇ ವೈಯಕ್ತಿಕ ಕಾರಣಗಳು ಇಲ್ಲ ಎಂಬುದು ತಿಳಿದು ಬಂದಿತ್ತು.. ಜೊತೆಗೆ ಸೈದ್ದಾಂತಿಕ ಹಿನ್ನಲೆಯಲ್ಲಿ ಹತ್ಯೆ ನಡೆದಿರುವುದು ಕೂಡ ಎಸ್ಐಟಿಗೆ ಸ್ಪಷ್ಟವಾಗಿತ್ತು.
ಹಂತಕರ ಬೆನ್ನತ್ತಿರುವ ಎಸ್ಐಟಿ ತಂಡಕ್ಕೆ ಈಗ ಮತ್ತಷ್ಟು ಮಹತ್ವದ ಮಾಹಿತಿಗಳು ದೊರತಿವೆ.. ಯಾವುದೇ ಸಂಘಟನೆಗಳಿಗೂ ಸೇರದ ಪ್ರೊಫೆಷನಲ್ ಕಿಲರ್ಸ್ಗಳು ಕೃತ್ಯ ಎಸಗಿದ್ದು, ಇಡೀ ದೇಶದಲ್ಲಿ 25ಕ್ಕೂ ಹೆಚ್ಚು ಹತ್ಯೆ ಪ್ರಕರಣಗಳಲ್ಲಿ ಹಂತಕರು ಭಾಗಿಯಾಗಿರುವುದಾಗಿ ಎಸ್ಐಟಿಗೆ ಮಾಹಿತಿ ಸಿಕ್ಕಿದೆ. ಅಲ್ಲದೆ, ವಿದೇಶದಲ್ಲೂ ತಮ್ಮ ನೆಟ್ವರ್ಕ್ಗಳನ್ನು ಹೊಂದಿರುವ ಈ ಹಂತಕರು ಪ್ರಮುಖ ಸಂಘಟನೆಯೊಂದರ ಶ್ರೀರಕ್ಷೆಯಲ್ಲಿ ಸೇಫ್ ಆಗಿರುವುದಾಗಿ ಕೂಡ ಹೇಳಲಾಗುತ್ತಿದೆ.
ಇಲ್ಲಿಯವರೆಗೂ ಹಂತಕರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಡದ ಎಸ್ ಐಟಿಯ ಹಿರಿಯ ಅಧಿಕಾರಿಗಳು, ಈ ವಿಚಾರವನ್ನು ಕೂಡ ಅಲ್ಲಗೆಳೆದಿದ್ದಾರೆ.. ಇನ್ನು, ಇಷ್ಟು ದಿನಗಳ ಕಾಲ ಪ್ರಶ್ನೆಯಾಗೇ ಉಳಿದಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಈಗ ಮತ್ತೆ ಜೀವ ಬಂದಂತಾಗಿದೆ. ಸದ್ಯ ಸಿಕ್ಕಿರುವ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳನ್ನು ಯಾವಾಗ ಬಂಧಿಸುತ್ತಾರೆ ಅನ್ನೋದು ಪ್ರಶ್ನೆಯಾಗೆ ಉಳಿದಿದೆ.
- ಜಗದೀಶ ಬಸವರಾಜು, ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.