ಗೋಪಾಲ ವಾಜಪೇಯಿ ಇನ್ನಿಲ್ಲ

Published : Sep 21, 2016, 10:39 AM ISTUpdated : Apr 11, 2018, 12:53 PM IST
ಗೋಪಾಲ ವಾಜಪೇಯಿ ಇನ್ನಿಲ್ಲ

ಸಾರಾಂಶ

ಬೆಂಗಳುರು (ಸೆ.21):  ಪತ್ರಿಕೋದ್ಯಮ, ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ರಂಗದ ಬಹು ದಶಕಗಳ ಸಾಂಗತ್ಯ ಹೊಂದಿದ್ದ ಗೋಪಾಲ ವಾಜಪೇಯಿ ಅವರು ಕೊನೆಯುಸಿರೆಳೆದಿದ್ದಾರೆ.

ವಯಸ್ಸು ಅರವತ್ತಾರಾಗಿದ್ದರೂ ಸದಾ ಯುವಕನಂತೆ ಚುರುಕಾಗಿದ್ದ ವಾಜಪೇಯಿ ಅವರು  ಅಸ್ತಮಾ ಕಾಯಿಲೆಯಿಂದ ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದರು.

ಈ ಮದ್ಯೆ ಸ೦ತೆಯಲ್ಲಿ ನಿ೦ತ ಕಬೀರ ಚಿತ್ರಕ್ಕೆ ಹಾಡುಗಳನ್ನು ಬರೆದು ಸೈ ಎನಿಸಿಕೊ೦ಡೊದ್ದರು. ಅನಾರೋಗ್ಯದ ಹಿನ್ನೆಲೆ  ಕುಸುಮ ಆಸ್ಪತ್ರೆಗೆ ದಾಖಲಾಗಿದ್ದ ಅವರು  ನಿಧನರಾಗಿದ್ದಾರೆ.

ಓದನ್ನು ಅರ್ಧಕ್ಕೇ ಬಿಟ್ಟು ಪತ್ರಿಕೋದ್ಯಮದ ತಿರುಗಣಿಗೆ ಬಿದ್ದ ಅವರು ಸಂಯುಕ್ತ ಕರ್ನಾಟಕ ಸೇರಿದಂತೆ ಅನೇಕ ಪ್ರಸಿದ್ಧ ಪತ್ರಿಕೆಗಳಲ್ಲಿ ದೊಡ್ಡ ಜವಾಬ್ದಾರಿ ನಿಭಾಯಿಸಿ ದೃಶ್ಯ ಮಾಧ್ಯಮಕ್ಕೂ ಅಡಿಯಿರಿಸಿದ್ದ ವಾಜಪೇಯಿಯವರದ್ದು ಚಿತ್ರರಂಗದಲ್ಲಿಯೂ ದೊಡ್ಡ ಹೆಸರು ಮಾಡಿದ್ದರು.

ಸಂತ ಶಿಶುನಾಳ ಷರೀಫ ಚಿತ್ರದ ಮೂಲಕ ಸಂಭಾಷಣಕಾರನಾಗಿ ಚಿತ್ರರಂಗ ಪ್ರವೇಶಿಸಿದ ಅವರು, ಸಂಗ್ಯಾ ಬಾಳ್ಯ ಮುಂತಾದ ಚಿತ್ರಗಳಿಗೆ ಚೆಂದದ ಹಾಡು ಬರೆದ ವಾಜಪೇಯಿಯವರು ನಾಗಮಂಡಲ ಚಿತ್ರದ ಹಾಡುಗಳ ಮೂಲಕ ಇಂದಿಗೂ ಕಾಡುತ್ತಲೇ ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌
ಗ್ಯಾರಂಟಿ ಎಫೆಕ್ಟ್: ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಉಗ್ರಪ್ಪ ಆತಂಕ; ಸತ್ಯ ಒಪ್ಪಿಕೊಂಡರಾ ಕಾಂಗ್ರೆಸ್ ಹಿರಿಯ ನಾಯಕ?