‘ಜಗದ ಕವಿ’ಯನ್ನು ನೆನೆದ ಗೂಗಲ್ ಡೂಡಲ್, ಗೂಗಲ್ ಪೇಜ್ ನಲ್ಲಿ ಕವಿಶೈಲನಿಗೆ ನಮನ ಸಲ್ಲಿಸಿದೆ.
ಇಂದು ರಾಷ್ಟ್ರಕವಿ ಕುವೆಂಪು ಅವರ 113ನೇ ವರ್ಷದ ಹುಟ್ಟುಹಬ್ಬ, ಈ ಹಿನ್ನೆಲೆ ಗೂಗಲ್ ಸಂಸ್ಥೆಯು ಕುವೆಂಪು ಅವರಿಗೆ ಗೌರವ ಸಲ್ಲಿಸಿದ್ದು, ಗೂಗಲ್ ಡೂಡಲ್ನಲ್ಲಿ ಕುವೆಂಪು ಅವರ ಚಿತ್ರವನ್ನು ಪ್ರಕಟಿಸಿದೆ. ‘ಜಗದ ಕವಿ’ಯನ್ನು ನೆನೆದ ಗೂಗಲ್ ಡೂಡಲ್, ಗೂಗಲ್ ಪೇಜ್ ನಲ್ಲಿ ಕವಿಶೈಲನಿಗೆ ನಮನ ಸಲ್ಲಿಸಿದೆ. ಕವಿ ಶೈಲದ ಬಂಡೆ ಮೇಲೆ ಕೂತು ಕುವೆಂಪು ಬರೆಯುತ್ತಿರುವ ಚಿತ್ರವನ್ನ ಡೂಡಲ್ನಲ್ಲಿ ಹಾಕಲಾಗಿದೆ. ಜೊತೆಗೆ ಕನ್ನಡದಲ್ಲಿ ಗೂಗಲ್ ಎಂದು ಬರೆಯಲಾಗಿದೆ. ವರನಟ ಡಾ.ರಾಜ್ಕುಮಾರ್ ನಂತರ ರಾಷ್ಟ್ರಕವಿ ಕುವೆಂಪು ಅವರಿಗೆ ಗೂಗಲ್ ನಮನ ಸಲ್ಲಿಸಿರುವುದು ಕನ್ನಡಿಗರಿಗೆ, ಕನ್ನಡ ಸಾಹಿತ್ಯಕ್ಕೆ ಸಂದ ಗೌರವ ಇದಾಗಿದೆ.