
ನವದೆಹಲಿ: ಇದುವರೆಗೆ ಭಾರೀ ಶ್ರೀಮಂತರು ಮತ್ತು ವಿದೇಶಿಯರಿಗೆ ಸೀಮಿತ ಎನ್ನುವಂತಾಗಿದ್ದ ಐಷಾರಾಮಿ ಪ್ಯಾಲೇಸ್ ಆನ್ ವೀಲ್ಸ್, ಮಹಾರಾಜಾ ಎಕ್ಸ್‌ಪ್ರೆಸ್ ಮತ್ತು ಗೋಲ್ಡನ್ ಚಾರಿಯಟ್‌ನಂಥ ರೈಲುಗಳಲ್ಲಿ ಶೀಘ್ರವೇ ಜನಸಾಮಾನ್ಯರೂ ಓಡಾಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಕಾರಣ, ಈ ರೈಲುಗಳ ಪ್ರಯಾಣ ವೆಚ್ಚವನ್ನು ಶೇ.50ರಷ್ಟುಕಡಿತಗೊಳಿಸುವ ಬಗ್ಗೆ ರೈಲ್ವೆ ಸಚಿವಾಲಯ ನಿರ್ಧರಿಸಿದ್ದು, ಶೀಘ್ರ ಈ ಕುರಿತು ಆದೇಶ ಹೊರಡಿಸಲಿದೆ ಎನ್ನಲಾಗಿದೆ.
ದೇಶದ ಐತಿಹಾಸಿಕ, ಪಾರಂಪರಿಕ, ಪ್ರವಾಸೋದ್ಯಮ ತಾಣಗಳನ್ನು, ಐಷಾರಾಮಿ ಸವಲತ್ತುಗಳೊಂದಿಗೆ ಸಂದರ್ಶಿಸಲು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮೂರು ರೈಲು ಸೇವೆಗಳನ್ನು ಆರಂಭಿಸಿದೆ.
ಈ ಪೈಕಿ ಪ್ಯಾಲೇಸ್ ಆನ್ ವೀಲ್ಸ್ ರಾಜಸ್ಥಾನದಲ್ಲಿ, ಗೋಲ್ಡನ್ ಚಾರಿಯೆಟ್ ಕರ್ನಾಟಕ, ತಮಿಳುನಾಡು, ಆಂಧ್ರದಲ್ಲಿ, ಮಹಾರಾಜಾ ಎಕ್ಸ್‌ಪ್ರೆಸ್ ರೈಲು ದೇಶಾದ್ಯಂತ ವಿವಿಧ ಪ್ರದೇಶಗಳಿಗೆ ತೆರಳುವ ಮೂಲಕ ವಿಶೇಷ ಪ್ರವಾಸಿಗರಿಗೆ ಹೊಸ ಅನುಭೂತಿ ಕಲ್ಪಿಸುತ್ತವೆ. ಆದರೆ ಇವುಗಳ ಟಿಕೆಟ್ ದರ ಭಾರೀ ದುಬಾರಿ ಇರುವ ಕಾರಣ, ಇವುಗಳ ಸೀಟು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವುದು ಕಡಿಮೆ. ಹೀಗಾಗಿ ಇಂಥ ರೈಲುಗಳ ಟಿಕೆಟ್ ದರ ಇಳಿಸಬೇಕೆಂದು ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ, ರೈಲ್ವೆಗೆ ಮನವಿ ಮಾಡಿತ್ತು.
ಈ ಮನವಿ ಬೆನ್ನಲ್ಲೇ ದೇಶಾದ್ಯಂತ ಸಂಚರಿಸುವ ಮೂರು ಐಷಾರಾಮಿ ರೈಲುಗಳ ಟಿಕೆಟ್ ದರವನ್ನು ಶೇ.50ರಷ್ಟುಇಳಿಸುವ ಬಗ್ಗೆ ನಿರ್ಧಾರ ಕೈಗೊಮಡಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.