
ಮುಂಬೈ(ನ.19): ಹಳೆ ನೋಟು ಬದಲಿಸಿಕೊಳ್ಳಲು ದೇಶದ ಜನತೆ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಜನತೆಗೆ ಸಮಾಧಾನಕರ ಸುದ್ದಿ ನೀಡಿದೆ.
ನೋಟು ಬದಲಾವಣೆ ಸಮಸ್ಯೆ ಪರಿಷ್ಕಾರಕ್ಕೆ ಮುಂದಾಗಿರುವ ರಿಸರ್ವ್ ಬ್ಯಾಂಕ್ ನೋಟು ಬದಲಾವಣೆಯ ಅಂತಿಮ ದಿನಾಂಕವನ್ನು ನವೆಂಬರ್ 24ರ ಬದಲಿಗೆ ಡಿಸೆಂಬರ್ 30ಕ್ಕೆ ವಿಸ್ತರಿಸಿದೆ.
ಆದರೆ ನೋಟು ಬದಲಾವಣೆ ಮಿತಿ ಒಂದು ಬಾರಿಗೆ 2000 ರು. ಎಂಬ ನಿರ್ಧಾರವನ್ನು ಮುಂದುವರೆಸುವುದಾಗಿ ಆರ್ ಬಿಐ ತಿಳಿಸಿದೆ. ಓರ್ವ ವ್ಯಕ್ತಿ ಒಂದು ಬಾರಿಗೆ 2000 ರು.ಹಣವನ್ನು ಮಾತ್ರ ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಅದಕ್ಕಿಂತಲೂ ಹೆಚ್ಚಿನ ಹಣವನ್ನು ಬದಲಾಯಿಸಿಕೊಳ್ಳುವಂತಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.