ಐ ಫೋನ್ ಬಳಕೆದಾರರಿಗೆ ಒಂದು ಗುಡ್ ನ್ಯೂಸ್

By Suvarna Web DeskFirst Published Dec 30, 2017, 9:20 AM IST
Highlights

ಆ್ಯಪಲ್ ತನ್ನ ಭಾರತೀಯ ಬಳಕೆದಾರರ ಹಳೆಯ ಐಫೋನ್‌ಗಳ ಬ್ಯಾಟರಿಗಳನ್ನು ಬದಲಾಯಿಸಿಕೊಳ್ಳುವ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ.

ನವದೆಹಲಿ: ಆ್ಯಪಲ್ ತನ್ನ ಭಾರತೀಯ ಬಳಕೆದಾರರ ಹಳೆಯ ಐಫೋನ್‌ಗಳ ಬ್ಯಾಟರಿಗಳನ್ನು ಬದಲಾಯಿಸಿಕೊಳ್ಳುವ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ.

ಐಫೋನ್‌ಗಳಲ್ಲಿನ ಬ್ಯಾಟರಿ ಚಾರ್ಜ್ ಕಡಿಮೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಕ್ಷಮೆ ಯಾಚಿಸಿರುವ ಆ್ಯಪಲ್, ಹೊಸ ಬ್ಯಾಟರಿಗಳಿಗೆ ಬದಲಿಸಿಕೊಳ್ಳಲು ಅವಕಾಶ ನೀಡಿದೆ.

ಬ್ಯಾಟರಿ ಬದಲಿಸುವ ಅಗತ್ಯವಿರುವ ಐಫೋನ್-6 ಮತ್ತು ನಂತರದ ಆ್ಯಪಲ್ ಬಳಕೆದಾರರು 2000 ರು. (ತೆರಿಗೆ ಹೊರತುಪಡಿಸಿ) ನೀಡಬೇದೆ. ಮೊದಲು ಕಂಪೆನಿ 6000 ರು. ಶುಲ್ಕ ಘೋಷಿಸಿತ್ತು. ಈಗ 4000 ರು. ಕಡಿಮೆಗೊಳಿಸಿ ಅದನ್ನು 2000 ರು.ಗೆ ಇಳಿಸಿದೆ.

click me!