ಉದ್ಯೋಗಿಗಳೇ ಮೋದಿ ಸರ್ಕಾರದಿಂದ ನಿಮಗೊಂದು ಸಿಹಿ ಸುದ್ದಿ

By Suvarna Web DeskFirst Published Jan 15, 2018, 7:52 AM IST
Highlights

ಸಂಘಟಿತ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಸಿಹಿ ಸುದ್ದಿಯೊಂದು ಸಿಗುವ ಸಾಧ್ಯತೆ ಇದೆ. ತೆರಿಗೆ ರಹಿತ ಗ್ರ್ಯಾಚ್ಯುಟಿ ಮಿತಿಯನ್ನು 20 ಲಕ್ಷ ರು.ಗೆ ಏರಿ ಸಬೇಕೆಂಬ ಉದ್ಯೋಗಿಗಳ ಬಹುದಿನದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಕುರಿತ ವಿಧೇಯಕ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.

ನವದೆಹಲಿ: ಸಂಘಟಿತ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಸಿಹಿ ಸುದ್ದಿಯೊಂದು ಸಿಗುವ ಸಾಧ್ಯತೆ ಇದೆ. ತೆರಿಗೆ ರಹಿತ ಗ್ರ್ಯಾಚ್ಯುಟಿ ಮಿತಿಯನ್ನು 20 ಲಕ್ಷ ರು.ಗೆ ಏರಿ ಸಬೇಕೆಂಬ ಉದ್ಯೋಗಿಗಳ ಬಹುದಿನದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಕುರಿತ ವಿಧೇಯಕ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.

ಇದು ಪಾಸಾದರೆ ನೌಕರರಿಗೆ  20 ಲಕ್ಷ ರು.ವರೆಗೆ ತೆರಿಗೆ ರಹಿತ ಗ್ರ್ಯಾಚ್ಯುಟಿ ಲಭಿಸಲಿದೆ. ಒಂದು ಕಂಪನಿಯಲ್ಲಿ 5 ವರ್ಷಕ್ಕಿಂತ ಹೆಚ್ಚಿನ ವರ್ಷ ಕೆಲಸ ಮಾಡಿದವರಿಗೆ ಈವರೆಗೆ 10 ಲಕ್ಷ ರು.ವರೆಗೆ ಗ್ರ್ಯಾಚ್ಯುಟಿ ಲಭಿಸುತ್ತಿತು ಇದರ ಮಿತಿಯನ್ನು 20 ಲಕ್ಷ ರು.ಗೆ ಹೆಚ್ಚು ಮಾಡುವ ಉದ್ದೇಶದಿಂದ ಗ್ರ್ಯಾಚ್ಯುಟಿ ಪಾವತಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ಬಜೆಟ್ ಅಧಿವೇಶನದಲ್ಲಿ ಇದು ಪಾಸಾಗುವ ಸಾಧ್ಯತೆ ಇದ್ದು, ಬಳಿಕ 20 ಲಕ್ಷ ರು. ವರೆಗಿನ ಗ್ರ್ಯಾಚ್ಯುಟಿಗೆ ತೆರಿಗೆ ಇರದು. ಕಳೆದ ಚಳಿಗಾಲದ ಅಧಿವೇಶನದಲ್ಲೇ ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಿತ್ತು. ಗ್ರಾಚ್ಯುಟಿ ಜತೆಗೆ ಹೆರಿಗೆ ರಜೆ ಪ್ರಮಾಣವನ್ನು 12 ವಾರಗಳಿಂದ 26ವಾರಗಳಿಗೆ ಏರಿಸುವ ವಿಷಯ ಕೂಡಾ ಇದೇ ಮಸೂದೆಯಲ್ಲಿ ಇದೆ.

ಹೀಗಾಗಿ ಈ ಮಸೂದೆ ಮಹಿಳಾ ಉದ್ಯೋಗಿಗಳಿಗೆ ಡಬ್ಬಲ್ ಗಿಫ್ಟ್ ನೀಡಲಿದೆ. 7ನೇ ವೇತನ ಆಯೋಗದ ಶಿಫಾರಸಿನ ಅನುಸಾರ ಕೇಂದ್ರ ಸರ್ಕಾರಿ ನೌಕರರ ಗ್ರ್ಯಾಚ್ಯುಟಿ ಮಿತಿಯನ್ನು 10 ಲಕ್ಷ ರು.ನಿಂದ 20 ಲಕ್ಷ ರು.ವರೆಗೆ ಏರಿಸಲಾಗಿತ್ತು. ಇದೀಗ ಇತರ ನೌಕರರಿಗೂ ಇದೇ ಮಾದರಿ ಅನ್ವಯವಾಗಲಿದೆ.

ಗ್ಯ್ರಾ ಚ್ಯುಟಿ ಲೆಕ್ಕಾಚಾರ: ಒಂದು ವರ್ಷದಲ್ಲಿ ಉದ್ಯೋಗಿ ಯೊಬ್ಬನ 15 ದಿನದ ವೇತನವನ್ನು ಗ್ರ್ಯಾಚ್ಯುಟಿ ಎಂದು ಪರಿಗಣಿಸಿ, ಆತ ಎಷ್ಟು ವರ್ಷ ಕೆಲಸ ಮಾಡಿರುತ್ತಾರೋ ಅಷ್ಟು ವರ್ಷಕ್ಕೆ ಒಟ್ಟು ಮೊತ್ತ ಲೆಕ್ಕ ಮಾಡಿ ಅದನ್ನು ನಿವೃತ್ತಿ ಅಥವಾ ಕೆಲಸ ಬಿಡುವ ವೇಳೆ ನೀಡಲಾಗುತ್ತದೆ.

click me!