
ಬೆಂಗಳೂರು : ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ನಡುವೆ 4 ಹೊಸ ಮೆಮು (ವಿದ್ಯುತ್ ಚಾಲಿತ) ರೈಲು ಹಾಗೂ ಬಾಣಸ ವಾಡಿ- ಹೊಸೂರು (ಬೈಯಪ್ಪನ ಹಳ್ಳಿ ಮಾರ್ಗ) ನಡುವೆ ನಾಲ್ಕು ಡೆಮು (ಡೀಸೆಲ್ ಚಾಲಿತ) ರೈಲು ಸೋಮವಾರದಿಂದ (ಮಾ.12) ಸಂಚರಿಸಲಿವೆ.
ಈ 8 ಹೊಸ ರೈಲು ಸಂಚಾರದಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್‌ಫೀಲ್ಡ್ ಕಡೆಯ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆಯಿದೆ. ಐಟಿ-ಬಿಟಿ ಕಂಪನಿಗಳು ಹೆಚ್ಚಿರುವ ಈ ಪ್ರದೇಶಗಳಿಗೆ ಹೆಚ್ಚುವರಿ ರೈಲು ಕಲ್ಪಿಸುವ ಬಹುದಿನಗಳ ಬೇಡಿಕೆ ಇದೀಗ ಈಡೇರಿದೆ. ನೂತನ ರೈಲು ಸಂಪರ್ಕದಿಂದ ಮೆಜೆಸ್ಟಿಕ್‌ನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಒಂದು ತಾಸಿನಲ್ಲಿ ವೈಟ್‌ಫೀಲ್ಡ್ ತಲುಪಬಹುದು.
ಎಂಟು ಬೋಗಿಗಳ ಎಂಟು ನೂತನ ರೈಲುಗಳು ಭಾನುವಾರ ಹೊರತುಪಡಿಸಿ ಉಳಿದ ಆರು ದಿನ ಈ ಮಾರ್ಗದಲ್ಲಿ ಸಂಚರಿಸಲಿವೆ. ಪ್ರತಿ ರೈಲಿನಲ್ಲಿ ಒಮ್ಮೆಗೆ 2,400 ಮಂದಿ ಪ್ರಯಾಣಿಸಬಹುದು. ಡೀಸೆಲ್ ಚಾಲಿತ ಡೆಮು ರೈಲಿಗಿಂತ ವಿದ್ಯುತ್ ಚಾಲಿತ ಮೆಮು ರೈಲುಗಳ ವೇಗ ಹೆಚ್ಚಿರುತ್ತದೆ. ಈ ನೂತನ ಸೇವೆಗಳು ಜನರ ಕಚೇರಿಗೆ ಸಮಯಕ್ಕೆ ಹೊಂದಿಕೆಯಾಗುವಂತೆ ವೇಳಾ ಪಟ್ಟಿ ಸಿದ್ಧಪಡಿಸಲಾಗಿದೆ. ಪ್ರಸ್ತುತ 110 ಉಪನಗರ ರೈಲುಗಳು ನಗರದಲ್ಲಿ ಸಂಚರಿಸುತ್ತಿದ್ದು, ಇದೀಗ ಹೆಚ್ಚುವರಿಯಾಗಿ 8 ಹೊಸ ರೈಲುಗಳು ಸೇರ್ಪಡೆಯಾಗಿವೆ.
ಮಾ.8ರಂದು ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ 8 ಹೊಸ ಉಪನಗರ ರೈಲು ಸೇವೆ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ನೈಋತ್ಯ ರೈಲ್ವೆ ನೂತನ ರೈಲು ಸೇವೆ ವೇಳಾಪಟ್ಟಿ ಪ್ರಕಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.