
ನವದೆಹಲಿ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಗಾಗಿ ಕೇಂದ್ರ ಸರ್ಕಾರ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ 8 ಮಹಾನಗರಗಳಲ್ಲಿ ‘ವಿಶೇಷ ಮಹಿಳಾ ಸುರಕ್ಷತೆ ಕಾರ್ಯಕ್ರಮ’ದಡಿ ಹಲವು ಯೋಜನೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ ಗೃಹ ಸಚಿವಾಲಯ 3000 ಕೋಟಿ ರು. ವೆಚ್ಚದ ಯೋಜನೆಯನ್ನು ಅಂಗೀಕರಿಸಿದೆ.
ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಹಾಗೂ ಲಖನೌದಲ್ಲಿ ಜಾರಿಗೆ ಬರಲಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2013 ರಲ್ಲಿ ಭೀಕರ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ನಿರ್ಭಯಾ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ನಿರ್ಭಯಾ ನಿಧಿ’ಯಡಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ದೆಹಲಿಗೆ 663.67 ಕೋಟಿ, ಮುಂಬೈಗೆ 252 ಕೋಟಿ, ಚೆನ್ನೈಗೆ 425.06 ಕೋಟಿ, ಅಹಮದಾಬಾದ್‌ಗೆ 253 ಕೋಟಿ, ಕೋಲ್ಕತಾಗೆ 181.32 ಕೋಟಿ, ಹೈದರಾಬಾದ್‌ಗೆ 282.50 ಕೋಟಿ, ಲಖನೌಗೆ 195 ಕೋಟಿ ರು. ಗಳನ್ನು ನಿಗದಿಗೊಳಿಸಲಾಗಿದೆ. ಆದರೆ ಬೆಂಗಳೂರಿಗೆ ಈ ಎಲ್ಲ ನಗರಗಳಿಗಿಂತ 667 ಕೋಟಿ ರು. ಘೋಷಿಸಲಾಗಿ
ಯೋಜನೆಗಳು ಏನು?
ಸಂಪೂರ್ಣ ಮಹಿಳೆಯರನ್ನೇ ಒಳಗೊಂಡ ‘ಶೀ’ ಗಸ್ತು ತಂಡಗಳು. ಮಹಿಳೆಯರು ತೊಂದರೆಗೆ ಸಿಲುಕಿದಾಗ ಶೀಘ್ರ ಧಾ ವಿಸಲು ‘ಅಭಯಮ್’ ತುರ್ತು ಸ್ಪಂದನೆ ವಾಹನ. ಹೆಚ್ಚು ಅಪರಾಧ ನಡೆಯುವ ಸ್ಥಳಗಳಲ್ಲಿ ಸುರಕ್ಷಿತ ವಲಯ. ಬೀದಿ ದೀಪಗಳಿಗೆ ಸ್ಮಾರ್ಟ್ ಎಲ್‌ಇಡಿ ಅಳವಡಿಕೆ. ಆಧುನಿಕ ನಿರ್ವಹಣೆ ಹಾಗೂ ನಿಯಂತ್ರಣ ಕೇಂದ್ರಗಳ ಜತೆ ಸಂಪರ್ಕ ಹೊಂದಿದ ಸಿಸಿಟೀವಿ ಕೆಮೆರಗಳು.
ಸಾರ್ವಜನಿಕ ಸಾರಿಗೆಯಲ್ಲಿ ಭದ್ರತಾ ವ್ಯವಸ್ಥೆ. ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆ ಮೊಳಗಿ ಸಲು ಗುಂಡಿ (ಪ್ಯಾನಿಕ್ ಬಟನ್). ಮಹಿಳೆ ಯರಿಗೆ ಶೌಚಾಲಯ ಹಾಗೂ ಪ್ರಯಾಣ ವೇಳೆ ಮಹಿಳೆಯರು, ಮಕ್ಕಳಿಗೆ ವಿಶ್ರಾಂತಿ ಕೊಠಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.